KARNATAKA
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಚಿನ್ನದ ಬೇಟೆ, ರೂ. 11. 16 ಲಕ್ಷದ ಚಿನ್ನ ವಶ..!
ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನದ ಬೇಟೆಯಾಡಿದ್ದು ಒಟ್ಟು 11. 16 ಲಕ್ಷದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜನವರಿ 30 ರಂದು ದುಬೈನಿಂದ ಏರ್ ಇಂಡಿಯಾ ಏಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿಳಿದ ಕಾಸರಗೋಡಿನ ಪ್ರಯಾಣಿಕನನ್ನು ಸಂಶಯದ ಮೇರೆಗೆ ತಪಾಸಣೆ ನಡೆಸಿದಾಗ ಆತನ ಬೆಡ್ ಶೀಟ್, ಹಾರ್ಲಿಕ್ಸ್ ಬಾಟಲು ಮತ್ತು ರಟ್ಟಿನ ಫೈಲ್ ಗಳಲ್ಲಿ ಬಚ್ಚಟಿಟ್ಟಿದ್ದ 179 ಗ್ರಾಂ ಅಕ್ರಮ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇದರ ಒಟ್ಟು ಮೌಲ್ಯ 11, 16, 960 ಎಂದು ಅಂದಾಜಿಸಲಾಗಿದೆ.
You must be logged in to post a comment Login