LATEST NEWS
ತಲ್ವಾರ್ ಝಳಪಿಸಿ ಅಕ್ರಮ ದನ ಸಾಗಾಟ: ಮೂಡಬಿದರೆಯಲ್ಲಿ ಬಿಗುವಿನ ಪರಿಸ್ಥಿತಿ

ತಲ್ವಾರ್ ಝಳಪಿಸಿ ಅಕ್ರಮ ದನ ಸಾಗಾಟ: ಮೂಡಬಿದರೆಯಲ್ಲಿ ಬಿಗುವಿನ ಪರಿಸ್ಥಿತಿ
ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಮಂಗಳೂರು, ಮಾರ್ಚ್ 14 : ತಲ್ವಾರ್ ಝಳಪಿಸಿ ಅಕ್ರಮ ದನ ಕದ್ದುಕೊಂಡು ಹೋದ ಘಟನೆ ಮೂಡಬಿದ್ರೆಯಲ್ಲಿ ಸಂಭವಿಸಿದೆ. ಮೂಡಬಿದ್ರೆ ಯ ಪಡುಮಾರ್ನಾಡು ಎಂಬಲ್ಲಿ ಈ ಘಟನೆ ಸಂಭವಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.
ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ ಗೆ ತಲ್ವಾರ್ ತೋರಿಸಿ ಜೀವ ಬೆದರಿಕೆ ಹಾಕಿ ಕಾರಿನಲ್ಲಿ ಅಕ್ರಮ ದನ ಸಾಗಾಟ ಮಾಡಲಾಗಿದ್ದು, ಆರೋಪಿಗಳ ಬಗ್ಗೆ ತಕ್ಷಣ ಸ್ಥಳೀಯ ಪೋಲಿಸರಿಗೆ ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ.

ಆದರೆ ಈಗ ಬರುತ್ತೇವೆ, ಈಗ ಬರುತ್ತೇವೆ ಎಂದು ಕೇವಲ ಬಾಯಿ ಮಾತಿಗೆ ಹೇಳಿದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಆದರೂ ಗೋಕಳ್ಳರನ್ನು ಗಾಂಧಿನಗರದವರೆಗೆ ಬೆನ್ನಟಿದ ನಮ್ಮ ಕಾರ್ಯಕರ್ತನ ಕಾರಿಗೆ ಗೋಕಳ್ಳರು ಡಿಕ್ಕಿ ಹೊಡೇದು ಹಲ್ಲೆಗೆ ಯತ್ನಿಸಿದ್ದಾರೆ.
ನಂತರದಲ್ಲಿ ಸ್ಥಳದಿಂದ ಪರಾರಿಯಾದ ಕಳ್ಳರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂಡಬಿದ್ರೆ ಪೊಲೀಸರ ವಿರುದ್ದ ಬಜರಂಗದಳದ ಆಕ್ರೋಶ ವ್ಯಕ್ತ ಪಡಿಸಿ ಮೂಡಬಿದ್ರೆ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.