LATEST NEWS
ಸುಳ್ಯ – ಲಾರಿಯಲ್ಲಿ ಅಮಾನುಷವಾಗಿ ತುಂಬಿಸಿದ್ದ 25 ದನಗಳ ರಕ್ಷಣೆ

ಸುಳ್ಯ – ದನದ ಆಹಾರ ಸಾಗಾಟದ ಲಾರಿಯೊಂದರಲ್ಲಿ ಅಕ್ರಮವಾಗಿ 25 ದನಗಳನ್ನು ಸಾಗಾಟಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಪೊಲೀಸ್ ತಪಾಸಣೆ ವೇಳೆ ಲಾರಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಗೇಟಿನಲ್ಲಿ ತಪಾಸಣೆಯ ವೇಳೆ ಸಿಬ್ಬಂದಿ ವಿಚಾರಣೆ ನಡೆಸಿದಾಗ ಇದು ದನದ ಫುಡ್ ಸಾಗಾಟ ಎಂದು ಚಾಲಕ ಹೇಳಿದ್ದಾನೆ.

ಆದರೂ ಅನುಮಾನಗೊಂಡ ಗೇಟಿನ ಸಿಬ್ಬಂದಿ ಲಾರಿಯ ಒಳಗೆ ಇಣುಕಿ ನೋಡಿದಾಗ ದನದ ಫುಡ್ ನ ಜತೆಗೆ 25 ಕ್ಕೂ ಹೆಚ್ಚು ದನಗಳು ಇದ್ದವು. ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸುತ್ತಿದ್ದ ವೇಳೆ ಲಾರಿಯಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ತನಿಖೆ ನಡೆಯುತ್ತಿದೆ