ಸುಳ್ಯ ಜನವರಿ 25: ಕುಡಿದ ಮತ್ತಿನಲ್ಲಿ ಅಪ್ಪ ತನ್ನ ಸ್ವಂತ ಮಗನನ್ನೇ ಕತ್ತಿಯಿಂದ ಕಡಿದು ಮಾರಣಾಂತಿಕವಾಗಿ ಹಲ್ಲೆಗೊಳಿಸಿರುವ ಘಟನೆ ಸುಳ್ಯದಗ ಅಲೆಟ್ಟಿ ಎಂಬಲ್ಲಿ ನಡೆದಿದೆ. ಜಯಪ್ರಕಾಶ್ ಕತ್ತಿಯಿಂದ ಹಲ್ಲೆಗೊಳಗಾದ ಮಗ, ಹಲ್ಲೆಮಾಡಿದವರನ್ನು ರಾಮಣ್ಣ ನಾಯ್ಕ ಎಂದು ಗುರುತಿಸಲಾಗಿದೆ.

ಅಪ್ಪಮಗ ಇಬ್ಬರು ಕಂಠಪೂರ್ತಿ ಕುಡಿದು ಗಲಾಟೆ ಮಾಡಿಕೊಂಡಿದ್ದು, ಗಲಾಟೆ ಅತಿರೇಕಕ್ಕೆ ಹೋಗಿ ಸಿಟ್ಟಿಗೆದ್ದ ಅಪ್ಪ ಮನೆಯಲ್ಲಿದ್ದ ಕತ್ತಿಯಿಂದ ಮಗನ ಎದೆಗೆ ಇರಿದಿದ್ದಾರೆ. ಗಾಯಗೊಂಡ ಮಗನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.