Connect with us

    KARNATAKA

    ಕುಮಟಾ – ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗ್ಯಾಸ್ ಟ್ಯಾಂಕರ್

    ಕುಮಟಾ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ಉತ್ತರಕನ್ನಡದ ಹೊನಮಾಂವ ದೇವಸ್ಥಾನದ ಬಳಿ ಜನವಸತಿ ಪ್ರದೇಶದಲ್ಲಿ ನಡೆದಿದೆ.


    ಮಂಗಳೂರಿನಿಂದ ಗ್ಯಾಸ್ ತುಂಬಿದ ಟ್ಯಾಂಕರ್ ಬೆಳಗಾವಿಗೆ ಸಾಗಿಸುತ್ತಿದ್ದಾಗ ಲಾರಿಯ ಸಂಪರ್ಕ ತಪ್ಪಿದ ಟ್ಯಾಂಕರ್ ಕೆಳಗೆ ಉರುಳಿತು. ಆಗ ಟ್ಯಾಂಕರ್‌ನ ಸುರಕ್ಷಿತ ವಾಲ್ವ್ ಸಡಿಲಗೊಂಡು ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ ಉಂಟಾಗಿತ್ತು. ಅದನ್ನು ತಕ್ಷಣ ನಿಲ್ಲಿಸಲಾಯಿತು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಪಟ್ಟಣದ ಗಿಬ್ ವೃತ್ತದ ಸಿದ್ದಾಪುರ – ಚಂದಾವರ ಮಾರ್ಗ ಮೂಲಕ ಹೊನ್ನಾವರದ ಎಲ್.ಐ.ಸಿ ಕಚೇರಿ ಬಳಿ ಹೆದ್ದಾರಿ ಸಂಪರ್ಕಿಸುವಂತೆ ಕ್ರಮ ಕೈಗೊಳ್ಳಲಾಯಿತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೆರವು‌ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply