LATEST NEWS
ದೇರಳಕಟ್ಟೆ ಅಕ್ರಮ ದನ ಸಾಗಾಟ ಪತ್ತೆ – 9 ಗೋವುಗಳ ರಕ್ಷಣೆ ಮಾಡಿದ ಪೊಲೀಸರು

ಮಂಗಳೂರು ಅಕ್ಟೋಬರ್ 1 : ಅಕ್ರಮವಾಗಿ ದನ ಸಾಗಾಟ ನಡೆಸುತ್ತಿದ್ದ ವಾಹನವನ್ನು ಪೊಲೀಸರು ಅಡ್ಡಗಟ್ಟಿ 9 ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ದೇರಳಕಟ್ಟೆಯಲ್ಲಿ ನಿನ್ನೆ ನಡೆದಿದೆ.
ಕೊಣಾಜೆ ಎಸ್ ಐ ಮಲ್ಲಿಕಾರ್ಜುನ ಅವರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಬೊಲೆರೊ ಪಿಕಪ್ ವಾಹನದಲ್ಲಿ ಅಮಾನುಷವಾಗಿ ಸಾಗಿಸುತ್ತಿದ್ದ 9 ಗೋವುಗಳ ರಕ್ಷಣೆ ಮಾಡಿದ್ದಾರೆ. ಆರೋಪಿಗಳಿಬ್ಬರು ಪೊಲೀಸ್ ತಂಡ ನೋಡಿದ ಕೂಡಲೇ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.

Continue Reading