Connect with us

LATEST NEWS

ಮಂಗಳೂರು ಡ್ರಗ್ಸ್ ಪ್ರಕರಣ ಮತ್ತೊಬ್ಬ ಕೊರಿಯೋಗ್ರಾಫರ್ ಬಂಧನ – ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಬಗ್ಗೆ ಮಾಹಿತಿ

ಮಂಗಳೂರು ಅಕ್ಟೋಬರ್ 1: ಮಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಡ್ಯಾನ್ಸ್ ಕೊರಿಯೋಗ್ರಾಫರನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಬೆಂಗಳೂರು ಮೂಲದ ಕೊರಿಯೋಗ್ರಾಫರ್ ಸ್ಯಾಮ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಬಾಲಿವುಡ್ ನಟ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ನಂತರ ಈಗಾಗಲೇ ಹಲವಾರು ಮಂದಿ ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ ಈಗ ಮತ್ತೊಬ್ಬ ಡ್ಯಾನ್ಸ್ ಕೊರಿಯೋಗ್ರಾಫರ್ ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸ್ಯಾಮ್ ಫೆರ್ನಾಂಡಿಸ್ ಮಹತ್ವದ ಮಾಹಿತಿಗಳನ್ನು ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದ್ದು, ಕೆಲ ಕಿರುತೆರೆ ಕಲಾವಿದರು, ಡ್ಯಾನ್ಸರ್ ಗಳಿಂದ ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿಯನ್ನು ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೆ ಹಲವು ಸ್ಯಾಂಡಲ್ ವುಡ್ ನಟ ನಟಿಯರ ಡ್ರಗ್ ಲಿಂಕ್ ಬಗ್ಗೆ ಕೂಡ ಸ್ಯಾಮ್ ಪೆರ್ನಾಂಡಿಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಲಾಗಿದೆ.

ಈಗಾಗಲೇ ಕಿಶೋರ್ ಶೆಟ್ಟಿ ಬಂಧನದ ನಂತರ ಆಂಕರ್ ಅನುಶ್ರೀಯನ್ನು ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಈ ಸ್ಯಾಮ್ ಫೆರ್ನಾಂಡಿಸ್ ಬಂಧನದ ನಂತ ಮತ್ತೆ ಸ್ಯಾಂಡಲ್ ವುಡ್ ನ ಕೆಲವು ನಟಿಯರ ವಿಚಾರಣೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Facebook Comments

comments