Connect with us

    BANTWAL

    ಅಕ್ರಮ ಮರಳುಗಾರಿಕೆಗೆ ವರವಾದ ಕೊರೊನಾ ಲಾಕ್ ಡೌನ್

    ಅಕ್ರಮ ಮರಳುಗಾರಿಕೆಗೆ ವರವಾದ ಕೊರೊನಾ ಲಾಕ್ ಡೌನ್

    ಬಂಟ್ವಾಳ ಮೆ.1: ಅಕ್ರಮ ತಡೆಯುವ ಕೆಲಸ ಮಾಡಬೇಕಾದ ಅಧಿಕಾರಿಗಳೆಲ್ಲಾ ಕೊರೊನ ಮಹಾಮಾರಿ ತಡೆಯಲು ಹಗಲಿರುಳು ಶ್ರಮಿಸುತ್ತಿದ್ದರೆ,ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳಲು ಕೆಲವು ಮಂದಿ ಮುಂದಾಗಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ಮಾಡುವ ಮೂಲಕ ಈ ಮಂದಿ ರಾಜ್ಯದ ನೈಸರ್ಗಿಕ ಸಂಪತ್ತನ್ನು ಕೊಳ್ಳೆಹೊಡೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

    ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೆಶಿವಾಲಯ ಎಂಬಲ್ಲಿ ನೇತ್ರಾವತಿ ನದಿಯಿಂದ ರಾತ್ರಿ ಪೂರ್ತಿ ಮರಳನ್ನು ಡ್ರಜ್ಜರ್ ಬಳಸಿ ತೆಗೆಯಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆದೇಶದ ಪ್ರಕಾರ ನದಿಯಿಂದ ಮರಳು ತೆಗೆಯಲು ಪರವಾನಗಿ ಪಡೆದಿರುವ ವ್ಯಕ್ತಿಗಳು ಸಂಜೆಯ ಬಳಿಕ ಮರಳು ತೆಗೆಯುವಂತಿಲ್ಲ, ಡ್ರಜ್ಜರ್ ಗಳನ್ನು ಬಳಸಿ ಮರಳು ತೆಗೆಯುವಂತಿಲ್ಲ ಎನ್ನುವ ಷರತ್ತುಗಳಿರುತ್ತವೆ. ಆದರೆ ಇಲ್ಲಿ ಮಾತ್ರ ಮರಳು ದಂಧೆಕೋರರು ಲಾಕ್ ಡೌನ್ ಹಿನ್ನಲೆಯಲ್ಲಿ ಮರಳು ತೆಗೆಯುವುದು ನಿಶೇಧವಾಗಿರುವ ಕಾರಣಕ್ಕಾಗಿ ಇದೀಗ ರಾತ್ರಿ ಹೊತ್ತಿನಲ್ಲೇ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    ಅಲ್ಲದೆ ಟನ್ ಗಟ್ಟಲೆ ಮರಳನ್ನು ಖಾಸಗಿ ಸ್ಥಳಗಳಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದಾಗಿ ಎಲ್ಲ ವಹಿವಾಟುಗಳು ಬಂದ್ ಆಗಿದ್ದು, ಸರಕಾರಗಳು ಮರಳಿನಂತಹ ನೈಸರ್ಗಿಕ ಸಂಪನ್ಮೂಲಗಳ ಮೂಲಕವೇ ಆದಾಯವನ್ನು ನಿರೀಕ್ಷಿಬೇಕಾದ ಸಮಯದಲ್ಲಿ ಈ ರೀತಿ ನೈಸರ್ಗಿಕ ಸಂಪತ್ತಿನ ಲೂಟಿ ಹೊಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಸ್ಥಳೀಯರಿಂದ ಕೇಳಿ ಬರುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *