ಭಾರಿ ಮಳೆಗೆ ಸಂಪೂರ್ಣ ಹಾನಿಗೊಳಗಾದ ಮನೆಗಳು ಸಂಕಷ್ಟದಲ್ಲಿ ಕೊರೊನಾ ಸ್ಟೇ ಹೋಮ್

ಪುತ್ತೂರು ಮೆ.1 ಲಾಕ್ ಡೌನ್ ಹಿನ್ನಲೆಯಲ್ಲಿ ಜನರು ಮನೆಯಲ್ಲೇ ಇರಬೇಕು ಎನ್ನುವ ಸೂಚನೆಯನ್ನು ಸರಕಾರ ಈಗಾಗಲೇ ನೀಡಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಿನ್ನೆ ಸುರಿದ ಭಾರೀ ಮಳೆ-ಗಾಳಿಗೆ ಹತ್ತಕ್ಕೂ ಮಿಕ್ಕಿದ ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ.

 ಭಾರೀ ಗಾಳಿಗೆ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಕೆಲವು ಮನೆಗಳ ಮೇಲೆ ಭಾರೀ ಗಾತ್ರದ ಮರಗಳು ಉರುಳಿದ ಪರಿಣಾಮ ಮನೆಯಲ್ಲಿ ನಿಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಮನೆ ಮಂದಿ ನೆರೆಹೊರೆಯ ಮನೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಳೆ-ಗಾಳಿಯಿಂದ ಲಕ್ಷಾಂತರ ಮೌಲ್ಯದ ಹಾನಿ‌ ಸಂಭವಿಸಿದ್ದು, ಸಾವಿರಾರು ಸಂಖ್ಯೆಯ ಅಡಿಕೆ ಮರಗಳು ಧರೆಗುರುಳಿವೆ. ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಲ್ಲೇ ಇರಬೇಕೆಂದು‌ ಬಯಸಿದವರಿಗೂ ನಿನ್ಮೆ ಸುರಿದ ಮಳೆ ಮನೆಯಲ್ಲೂ ನಿಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದೆ.