LATEST NEWS
ಶಿರೂರು ಸ್ವಾಮಿಜಿ ಅಸಹಜ ಸಾವಿನ ಪ್ರಕರಣ ತನಿಖೆಗೆ 5 ತಂಡ ರಚನೆ – ಐಜಿಪಿ
ಶಿರೂರು ಸ್ವಾಮಿಜಿ ಅಸಹಜ ಸಾವಿನ ಪ್ರಕರಣ ತನಿಖೆಗೆ 5 ತಂಡ ರಚನೆ – ಐಜಿಪಿ
ಉಡುಪಿ ಜುಲೈ 24: ಶಿರೂರು ಸ್ವಾಮಿಜಿ ಅಸಹಜ ಸಾವಿನ ತನಿಖೆಗೆ ಸಂಬಂಧಪಟ್ಟಂತೆ ಉಡುಪಿ ಎಸ್ಪಿ ಕಚೇರಿಯಲ್ಲಿ ಇಂದು ಮಹತ್ವದ ಸಭೆ ನಡೆದಿದೆ. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಇಂದು ಉಡುಪಿಗೆ ಭೇಟಿ ನೀಡಿದ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಪ್ರಕರಣದ ತನಿಖಾ ತಂಡದ ಜೊತೆ ತನಿಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ದಿನಪೂರ್ತಿ ಉಡುಪಿಯಲ್ಲಿದ್ದ ಐಜಿಪಿ ಅರುಣ್ ಚಕ್ರವರ್ತಿ ಹಿರಿಯಡ್ಕ ಸಮೀಪದ ಶಿರೂರಿನಲ್ಲಿರುವ ಮೂಲಮಠ ಹಾಗೂ ಉಡುಪಿ. ರಥಬೀದಿಯಲ್ಲಿರುವ ಶಿರೂರು ಮಠಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸ್ವಾಮೀಜಿ ನಿಗೂಢ ಸಾವಿನ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಈ ಪ್ರಕರಣದಲ್ಲಿ ಯಾರನ್ನೂ ಈವರೆಗೆ ಬಂಧಿಸಿಲ್ಲ. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲಿಸಿದ್ದೇನೆ ಎಂದು ಐಜಿಪಿ ಹೇಳಿದರು. ತನಿಖಾಧಿಕಾರಿ ಬೆಳ್ಳಿಯಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಜೊತೆ ಚರ್ಚೆ ಮಾಡಿದ್ದೇನೆ. ತನಿಖೆಗೆ ಐದು ತಂಡಗಳ ರಚನೆಯಾಗಿದೆ. ಎಲ್ಲಾ ತಂಡಗಳು ವಿವಿಧ ಆಯಾಮದಲ್ಲಿ ಕೆಲಸ ಮಾಡುತ್ತಿದೆ ಎಂದರು.
ಸಭೆಯ ನಂತರ ಶಿರೂರು ಮೂಲ ಮಠಕ್ಕೆ ಐಜಿಪಿ ಭೇಟಿ ನೀಡಿದ್ದರು. ಶಿರೂರು ಶ್ರೀ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ. ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಜೊತೆ ಮೂಲಮಠಕ್ಕೆ ಭೇಟಿಕೊಟ್ಟ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಐಜಿ ಶಿರೂರು ಶ್ರೀಗಳ ಬೃಂದಾವನವನ್ನು ವೀಕ್ಷಿಸಿದರು.