LATEST NEWS
ರಸ್ತೆ ಬಂದ್ ಮಾಡಿ ಮುಡಿಪು ಜಂಕ್ಷನ್ ರಸ್ತೆಯಲ್ಲೇ ಸೌಹಾರ್ದ ಇಫ್ತಾರ್ ಕೂಟ; ವಿಡಿಯೋ ವೈರಲ್
ಮಂಗಳೂರು ಮಾರ್ಚ್ 31: ರಸ್ತೆಯನ್ನು ಬಂದ್ ಮಾಡಿ ಅಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿದ ಘಟನೆ ಮಂಗಳೂರಿನ ಮುಡಿಪು ಜಂಕ್ಷನ್ ನಲ್ಲಿ ನಡೆದಿದ್ದು, ಇದೀಗ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುಡಿಪು ಜಂಕ್ಷನ್ನಲ್ಲಿ ಆಟೋ ರಾಜಕನ್ಮಾರ್ ಸಂಘಟನೆಯಿಂದ ಇಫ್ತಾರ್ ಕೂಟ ನಡೆಸಲಾಗಿದೆ. ರಿಕ್ಷಾ ಚಾಲಕರೆಲ್ಲರೂ ಒಟ್ಟಾಗಿ ಸೇರಿಕೊಂಡು ನಡೆಸಿದ ಈ ಇಫ್ತಾರ್ ಕೂಟದಲ್ಲಿ ರಿಕ್ಷಾ ಚಾಲಕರು, ವರ್ತಕರು, ಸ್ಥಳೀಯರು ಭಾಗಿಯಾಗಿದ್ದಾರೆ.
ಒಂದು ಭಾಗದ ರಸ್ತೆ ಮಧ್ಯೆ ಟೇಬಲ್, ಚಯರ್ ಇಟ್ಟು ಸಹಭೋಜನ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ, ಸ್ಥಳೀಯರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ಇಫ್ತಾರ್ ಕಾರ್ಯಕ್ರಮವನ್ನು ಸಭಾಂಗಣವೊಂದರಲ್ಲಿ ಆಯೋಜಿಸಲಾಗಿತ್ತು. ಆದರೆ ಹಿಂದೂ ಭಾಂದವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ ಮುಡಿಪು ಜಂಕ್ಷನ್ಗೆ ಈ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿದೆ.
ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದ್ದು. ಸಾಮಾಜಿಕ ಜಾಲತಾಣದಲ್ಲಿ ಆಯೋಜಕರ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅತೀ ಜರೂರು ಆದ ಕಾರ್ಯಕ್ರಮವಲ್ಲದಿದ್ದರೂ ರಸ್ತೆಯಲ್ಲಿ ಆಯೋಜಿಸುವ ಉದ್ಧೇಶದ ಸಾರ್ವಜನಿಕರು ಪ್ರಶ್ನಿಸಿದ್ದಾರೆ.