Connect with us

FILM

ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ….!!

ಮುಂಬೈ ಸೆಪ್ಟೆಂಬರ್ 26: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಿರುತ್ತೆ. ಆದರೆ ಇದೀಗ ನಟಿಯೊಬ್ಬಳು ತನಗೆ ಆದ ಅನುಭವದ ಬಗ್ಗೆ ಮಾತನಾಡಿದ್ದು. ಭಾರೀ ಸದ್ದು ಮಾಡುತ್ತಿದೆ. ಹಿಂದಿ ಕಿರುತೆರೆಯಲ್ಲಿ ಜನಂ ಮೋಹೇ ಬಿತಿಯ ಹಿ ಕಿಚೋ ಧಾರವಾಹಿ ಮೂಲಕ ಜನಮನ್ನಣೆ ಪಡೆದ ರತನ್ ರಜಪೂತ್ ತಮ್ಮ ವೃತ್ತಿ ಬದುಕಿನಲ್ಲಿ ಆಗಿದ್ದ ಕರಾಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.


ಮಾಧ್ಯಮವೊಂದರಲ್ಲಿ ಮಾತನಾಡಿದ್ದ ರತನ್ ಅವರು, 14 ವರ್ಷಗಳ ಹಿಂದೆ ಸಿನಿಮಾಕ್ಕಾಗಿ ಮುಂಬೈಗೆ ಹೋಗಿದ್ದೆ. ಅಲ್ಲಿ 60 ವರ್ಷದ ನಿರ್ಮಾಪಕರೊಬ್ಬರನ್ನು ಭೇಟಿಯಾಗಿದ್ದೆ. ಅವರು ನನ್ನನ್ನು ನೋಡಿ ನಿನ್ನ ಸಂಪೂರ್ಣ ಲುಕ್ ಬದಲಾಯಿಸಬೇಕು. ಅದಕ್ಕೆ ಆಗುವ ವೆಚ್ಚವನ್ನು ನಾನು ಭರಿಸುತ್ತೇನೆ. ಅದಕ್ಕೆ ನೀನು ನನ್ನೊಂದಿಗೆ ಸ್ನೇಹಿತೆ ಆಗಿರಬೇಕು ಎಂದು ಕೇಳಿದರು.


ನಾನು ನಿಮ್ಮ ಮಗಳಿನ ವಯಸ್ಸಿನವಳು ಅಂದೆ. ಅದಕ್ಕೆ ಅವರು ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದು ಹೇಳಿದರು. ಆ ಮಾತನ್ನು ಕೇಳಿ ನಾನು ಆಘಾತಕ್ಕೊಳಗಾದೆ. ತಡ ಮಾಡದೆ ಅಲ್ಲಿಂದ ಹೊರಟು ಬಂದುಬಿಟ್ಟಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *