Connect with us

DAKSHINA KANNADA

ಭಯ ಹುಟ್ಟಿಸುತ್ತೆ ಪುತ್ತೂರು ದರೋಡೆಯ 6 ಆರೋಪಿಗಳ ಕ್ರಿಮಿನಲ್ ಹಿಸ್ಟರಿ ನೋಡಿದ್ರೆ..!

ದರೋಡೆಯ ಪ್ರಮುಖ ಆರೋಪಿ ಸುಧೀರ್ ಮೇಲೆ ಪುತ್ತೂರು ಹಾಗೂ ವಿಟ್ಲ ಠಾಣೆಯಲ್ಲಿ ಮೊಕದ್ದಮೆಗಳಿವೆ, ವಸಂತ ಎಂಬವನ ಮೇಲೆ ಬದಿಯಡ್ಕ, ಕುಂಬಳೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ,ಕಿರಣ್ ಎಂಬಾತನ ಮೇಲೆ ಬಂಟ್ವಾಳ, ಬರ್ಕೆ, ಮಂಜೇಶ್ವರ ಠಾಣೆಯಲ್ಲಿ ಗಾಂಜಾ ಪ್ರಕರಣಗಳು, ಸನಲ್ ಕೆ.ವಿ.ಕುಖ್ಯಾತ ದರೋಡೆಕೋರನಾಗಿದ್ದು ಈತನ ಮೇಲೆ ಕೇರಳ ರಾಜ್ಯದಲ್ಲಿ ಒಟ್ಟು 15 ಪ್ರಕರಣಗಳಿವೆ.

ಪುತ್ತೂರು :  ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕುದ್ಕಾಡಿ ದರೋಡೆ ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಕಾಂಗ್ರೆಸ್ ಮುಖಂಡ ಗುರುಪ್ರಸಾದ್ ಅವರ ಮನೆಯಲ್ಲಿ ದರೋಡೆ ಮಾಡಿ ಎಂಟು ಪವನ್ ಚಿನ್ನ, 30 ಸಾವಿರ ನಗದು ಲೂಟಿ ಮಾಡಿದ್ದರು.

ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ನಟೋರಿಯಸ್‌ ಆರೋಪಿಗಳನ್ನು ಬಂಧಿಸಿದ್ದ ಪೊಲೀಸ್ ತಂಡವನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್‌ ಪಿ ರಿಷ್ಯಂತ್ ಶ್ಲಾಘಿಸಿ ನಗದು ಬಹುಮಾನ ನೀಡಿದ್ದಾರೆ.

ಸೆ.7 ರಂದು ಪುತ್ತೂರಿನ ಗ್ರಾಮಾಂತರ ಭಾಗದ ಬಡಗನ್ನೂರು ಗ್ರಾಮದ ಕುದ್ಕಾಡಿಯಲ್ಲಿ ಈ ಘಟನೆ ನಡೆದಿದ್ದು ಮನೆ ಮಂದಿಯನ್ನು ದರೋಡೆಕೋರರು ಕಟ್ಟಿ ಹಾಕಿ ಲೂಟಿ ಮಾಡಿದ್ದರು.

ಇದೀಗ ಪ್ರಕರಣದ ಆರು ಆರೋಪಿಗಳನ್ನ ಬಂಧಿಸಿದ ಪೊಲೀಸರು ಬಂಧಿಸಿರುವ ಬಗ್ಗೆ ಎಸ್‌ ಪಿ ರಿಷ್ಯಂತ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. ದರೋಡೆ ಮಾಡಿದ್ದ ಆರು ಜನರ ತಂಡ ಖತರ್ನಾಕ್ ತಂಡವಾಗಿತ್ತು.

ಆರು ಮಂದಿಯಲ್ಲಿ ಐವರು ಕೇರಳ ಮೂಲದವರಾಗಿದ್ದರೆ ಓರ್ವ ವಿಟ್ಲದ ಪೆರುವಾಯಿ ಮೂಲದವ ಆಗಿದ್ದ. ಆರೋಪಿಗಳಲ್ಲಿ ರವಿ ಎಂಬಾತ ಈಗಾಗ್ಲೇ ಜೀವಾವಧಿ ಶಿಕ್ಷೆಯಲ್ಲಿದ್ದು ಪೆರೋಲ್ ರಜೆಯಲ್ಲಿದ್ದ ವೇಳೆ ಐದು ಮಂದಿ ಜೊತೆ ಸೇರಿ ದರೋಡೆಗೆ ಸ್ಕೆಚ್ ಹಾಕಿದ್ದರು.

ಈ ಆರು ಆರೋಪಿಗಳ ಮೇಲೂ ಹಲವಾರು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ಇವೆ.

ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಮೇಲೆ ಪುತ್ತೂರು ಹಾಗೂ ವಿಟ್ಲ ಠಾಣೆಯಲ್ಲಿ ಮೊಕದ್ದಮೆಗಳಿವೆ, ವಸಂತ ಎಂಬವನ ಮೇಲೆ ಬದಿಯಡ್ಕ, ಕುಂಬಳೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ,ಕಿರಣ್ ಎಂಬಾತನ ಮೇಲೆ ಬಂಟ್ವಾಳ, ಬರ್ಕೆ, ಮಂಜೇಶ್ವರ ಠಾಣೆಯಲ್ಲಿ ಗಾಂಜಾ ಪ್ರಕರಣಗಳು, ಸನಲ್ ಕೆ.ವಿ.ಕುಖ್ಯಾತ ದರೋಡೆಕೋರನಾಗಿದ್ದು ಈತನ ಮೇಲೆ ಕೇರಳ ರಾಜ್ಯದಲ್ಲಿ ಒಟ್ಟು 15 ಪ್ರಕರಣಗಳಿವೆ.

ಮಹಮ್ಮದ್ ಫೈಝಲ್ ಮೇಲೆ ಪುತ್ತೂರು, ವಿಟ್ಲ, ಮಂಜೇಶ್ವರ, ಕುಂಬಳೆಯಲ್ಲಿ ಮತ್ತು ಅಬ್ದುಲ್ ನಿಸಾರ್ ಮೇಲೆ ಪುತ್ತೂರು, ವಿಟ್ಲ, ಮಂಜೇಶ್ವರದಲ್ಲಿ ಪ್ರಕರಣಗಳಿವೆ ಎಂದು ಎಸ್‌ಪಿ ಅವರು ಮಾದ್ಯಮಗಳಿಗೆ ಮಾಹಿತಿ ನೀಡಿದರು.

ಎಸ್ಪಿ ರಿಷ್ಯಂತ್, ಡಿವೈಎಸ್ಪಿ ಗಾನ ಪಿ ಕುಮಾರ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಯಾಗಿದ್ದು, ಆರೋಪಿಗಳ ಹೆಡೆಮುರಿಕಟ್ಟಿದ ಪೊಲೀಸ್ ತಂಡಕ್ಕೆ ನಗದು ಎಸ್ಪಿ ರಿಷ್ಯಂತ್ ನಗದು ಬಹುಮಾನ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *