DAKSHINA KANNADA
ಶಿಕ್ಷಕನ ತಪ್ಪು ಮಾಡಿದರೆ ವಿಧ್ಯಾರ್ಥಿಗಳ ಭವಿಷ್ಯಕ್ಕೇ ಮಾರಕ- ಸಚಿವ ಸುನಿಲ್ ಕುಮಾರ್
ಪುತ್ತೂರು, ಸೆಪ್ಟೆಂಬರ್ 05 : ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 5 ರಂದು ಹಮ್ಮಿಕೊಳ್ಳಲಾಗಿತ್ತು.
ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಧಾಟಿಸಿದರು. ಸಮಾಜವನ್ನು ಏಳಿಗೆಯ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಒಬ್ಬ ರಾಜಕಾರಣಿ ಮಾಡುವ ತಪ್ಪಿಗೂ, ಓರ್ವ ಶಿಕ್ಷಕ ಮಾಡುವ ತಪ್ಪಿಗೂ ವೆತ್ಯಾಸವಿದೆ.
ರಾಜಕಾರಣ ಹೆಚ್ಚೆಂದರೆ ಐದು ವರ್ಷಗಳ ಕಾಲ ತಪ್ಪು ಮಾಡಬಹುದು ಆದರೆ ಶಿಕ್ಷಕ ತಪ್ಪು ಮಾಡಿದಲ್ಲಿ ಅದು ವಿದ್ಯಾರ್ಥಿಗಳ ಭವಿಷ್ಯಕ್ಕೇ ಮಾರಕವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸಚಿವರು ಹಾಗು ಗಣ್ಯರು ಗೌರವಿಸಿದರು.