LATEST NEWS
ಬಾರ್ ಕಳ್ಳತನಕ್ಕೆ ಬಂದು ಪುಲ್ ಟೈಟ್ ಆಗಿ ಪೊಲೀಸರಿಗೆ ಸಿಕ್ಕಿ ಬಿದ್ದ ಕಳ್ಳರು…!!
ಚೆನ್ನೈ ಸೆಪ್ಟೆಂಬರ್ 05: ಮದ್ಯದ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿ ಪುಲ್ ಟೈಟ್ ಆಗಿ ಮೈಮರೆತಿದ್ದ ಇಬ್ಬರು ಕಳ್ಳರನ್ನು ತಮಿಳುನಾಡಿನ ತಿರುವಳ್ಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ಮೂಲದ ಮುನಿಯನ್ ಎಂದು ಗುರುತಿಸಲಾಗಿದೆ. ಇದೀಗ ಇಬ್ಬರ ಬಳಿ ಇದ್ದ 14,000 ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕವರಾಯಪೇಟೈಯಲ್ಲಿರುವ ಸರ್ಕಾರಿ ಟಾಸ್ಮಾಕ್ ಮದ್ಯದ ಅಂಗಡಿಯನ್ನು ವ್ಯಾಪಾರ ಮುಗಿದ ನಂತರ ಮುಚ್ಚಲಾಗಿತ್ತು. ಈ ವೇಳೆ ಇಬ್ಬರು ಕಳ್ಳರು ಅಂಗಡಿಯ ಗೋಡೆ ಕೊರೆದು ದೊಡ್ಡ ರಂಧ್ರ ಮಾಡಿ ಈ ಮೂಲಕ ಅಂಗಡಿ ಒಳಗೆ ನುಗ್ಗಿದ್ದಾರೆ. ನಂತರ ಅಂಗಡಿಯಲ್ಲಿದ್ದ ಮದ್ಯವನ್ನು ಕುಡಿಯಲು ಪ್ರಾರಂಭಿಸಿ ತಾವು ಎಲ್ಲಿದ್ದೇವೆ ಎಂಬ ಸಮಯ ಪ್ರಜ್ಞೆಯನ್ನು ಕಳೆದುಕೊಂಡಿದ್ದರು.
ನಂತರ ರಾತ್ರಿ ವೇಳೆ ಗಸ್ತು ನಡೆಸುತ್ತಿದ್ದ ಪೊಲೀಸರಿಗೆ ಅಂಗಡಿ ಒಳಗಿನಿಂದ ಶಬ್ದ ಕೇಳಿಬಂದಿದ್ದು, ಪರಿಶೀಲನೆ ನಡೆಸಲು ಮುಂದಾದಾಗ ಗೋಡೆಯಲ್ಲಿ ದೊಡ್ಡ ರಂಧ್ರ ಕೊರೆದಿರುವುದು ಮತ್ತು ಅಂಗಡಿಯೊಳಗೆ ಮದ್ಯದ ಬಾಟಲಿ ಹಿಡಿದುಕೊಂಡು ಕುಡಿಯುತ್ತಿರುವ ಇಬ್ಬರು ವ್ಯಕ್ತಿಯನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಬಳಿಕ ವಿಚಾರಣೆ ವೇಳೆ ಕಳ್ಳರು ಮದ್ಯದ ಬಾಟಲಿಯನ್ನು ಕದಿಯುವ ಉದ್ದೇಶದಿಂದ ಅಂಗಡಿಗೆ ನುಗ್ಗಿರುವುದಾಗಿ ತಿಳಿಸಿದ್ದಾರೆ.
You must be logged in to post a comment Login