Connect with us

LATEST NEWS

ರೈಲ್ವೆ ಹಳಿಯಲ್ಲಿ ರೀಲ್ಸ್ – ರೈಲು ಗುದ್ದಿದ ರಭಸಕ್ಕೆ ಯುವಕ ಪಲ್ಟಿ….ವಿಡಿಯೋ ವೈರಲ್

Share Information

ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಲು ರೈಲ್ವೆ ಹಳಿ ಮೇಲೆ ವಿಡಿಯೋ ಶೂಟ್ ಮಾಡುತ್ತಿರುವ ಸಂದರ್ಭ ಯುವಕನಿಗೆ ರೈಲು ಡಿಕ್ಕಿ ಹೊಡೆದ ಘಟನೆ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಜಿಪೇಟ್‍ನಲ್ಲಿ ನಡೆದಿದೆ.


ಈ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಹುಡಗನನ್ನು ಅಕ್ಷಯ್ ರಾಜ್ (17) ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ರೈಲ್ವೆ ಹಳಿಯ ಬಳಿ ಹುಡುಗ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ರೈಲು ಆತನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹುಡುಗ ಒಂದು ಸುತ್ತು ತಿರುಗಿ ನೆಲದ ಮೇಲೆ ಬಿದ್ದಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಘಟನೆಯ ಇಡೀ ವೀಡಿಯೋವನ್ನು ಮತ್ತೊಬ್ಬ ವ್ಯಕ್ತಿ ತನ್ನ ಫೋನ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಗಾಯಗೊಂಡ ಅಕ್ಷಯ್ ಅನ್ನು ಕೂಡಲೇ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಅಕ್ಷಯರಾಜ್ ಅನ್ನು ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಅಕ್ಷಯರಾಜ್ ಅವರು ಸ್ನೇಹಿತರ ಜತೆ ರೈಲು ಹಳಿಯ ಬಳಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ವೇಗವಾಗಿ ಚಲಿಸುತ್ತಿರುವ ರೈಲಿನ ಸಮೀಪ ನಡೆಯುತ್ತಿರುವ ವಿಡಿಯೊ ಚಿತ್ರೀಕರಣ ಮಾಡಬೇಕು ಮತ್ತು ಅದನ್ನು ಸಾಮಾಜಿಕ ಮಾಧ್ಯಮಗಳಿಗೆ ಅಪ್ಲೋಡ್ ಮಾಡಬೇಕು ಎಂದು ಬಯಸಿದ್ದರು.

https://twitter.com/MySalemCity/status/1566392104599027713


Share Information
Advertisement
Click to comment

You must be logged in to post a comment Login

Leave a Reply