Connect with us

DAKSHINA KANNADA

ಉದ್ಯೋಗದ ಭರವಸೆಯನ್ನು ಈಡೇರಿಸದಿದ್ದರೆ ಮುಖ್ಯಮಂತ್ರಿಗಳ ಮನೆ‌ ಮುಂದೆ ದರಣಿ: ಪ್ರಮೋದ್ ಮುತಾಲಿಕ್

ಕಡಬ, ಸೆಪ್ಟೆಂಬರ್ 19 : ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಲು ಆಗಮಿಸಿದ್ದ ಹಿಂದೂ ಮುಖಂಡ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸೆ.19ರಂದು ಮಧ್ಯಾಹ್ನ ಸವಣೂರಿನ ಪದ್ಮಯ್ಯ ಗೌಡ ಪರಣೆ ಅವರ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು ಮತೀಯವಾದದ ವಿರುದ್ಧ, ಕಮ್ಯುನಿಸ್ಟ್ ವಾದದ ವಿರುದ್ಧ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಯುವಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಹಿಂದೂಗಳ‌ ಮೇಲೆ ನಿರಂತರ ದಾಳಿಯಾಗುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಬೇಕು. ಹಿಂದೂಗಳ ನಡುವೆ ಏನೇ ಅಭಿಪ್ರಾಯ ಬೇಧವಿದ್ದರೂ ಒಂದಾಗಬೇಕು. ಕ್ಷಾತ್ರತ್ವದ ಮೂಲಕ ನಾವೇಲ್ಲರೂ ದುಷ್ಟರ ವಿರುದ್ಧ ಹೋರಾಡಬೇಕು. ದೇಶದ ಅಖಂಡತೆಗೆ ನಾವೆಲ್ಲರೂ ಒಂದಾಗಬೇಕಿದೆ ಎಂದರು.

ಪ್ರವೀಣ್ ನೆಟ್ಟಾರು ಅವರ ಮನೆಯವರಿಗೆ ಸರಕಾರದ ವತಿಯಿಂದ ನೀಡಲಾದ ಉದ್ಯೋಗದ ಭರವಸೆಯನ್ನು ಮುಖ್ಯಮಂತ್ರಿಗಳು ಈಡೇರಿಸದಿದ್ದರೆ ಮುಖ್ಯಮಂತ್ರಿಗಳ ಮನೆ‌ ಮುಂದೆ ದರಣಿ ನಡೆಸುತ್ತೇವೆ ಎಂದರು. ಪ್ರಮೋದ್ ಮುತಾಲಿಕ್ ಅವರನ್ನು ಪದ್ಮಯ್ಯ ಗೌಡ ಪರಣೆ ಹಾಗೂ ಮನೆಯವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸವಣೂರು ,ಪುತ್ತೂರು,ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು,ಬೆಳ್ಳಾರೆಯ ಬಜರಂಗದಳದ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು. ಎಲ್ಲರಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Advertisement
Click to comment

You must be logged in to post a comment Login

Leave a Reply