Connect with us

FILM

ಮಧ್ಯರಾತ್ರಿ ಕರೆದರೆ ಹೋಗಲೇ ಬೇಕು – ಸ್ಟಾರ ನಟರ ವಿರುದ್ದ ಮಲ್ಲಿಕಾ ಶರಾವತ್ ಬಾಂಬ್…!!

ಮುಂಬೈ ಅಗಸ್ಟ್ 02: ಬಾಲಿವುಡ್ ನಲ್ಲಿ ಹಾಟ್ ಹಾಟ್ ಚಿತ್ರಗಳ ಮೂಲಕ ಪಡ್ಡೆಹುಡುಗರ ಹೃದಯ ಗೆದ್ದಿದ್ದ ಮಲ್ಲಿಕಾ ಶರಾವತ್ ನೀಡಿ ಹೇಳಿಕೆ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ.


ಸಂದರ್ಶನ ಒಂದರಲ್ಲಿ ನಟಿ ಮಲ್ಲಿಕಾ ಶೆರಾವತ್​ ಅವರು ಹಿಂದಿ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಬಯಲಿಗೆ ಎಳೆದಿದ್ದಾರೆ. ನಾನು ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್​ನ ಎ-ಪಟ್ಟಿಯಲ್ಲಿರುವ ಅಥವಾ ಮುಂಚೂಣಿಯಲ್ಲಿದ್ದ ಬಾಲಿವುಡ್​ ನಟರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು.


ನಟರು ತಾವು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಇಷ್ಟಪಡುತ್ತಾರೆ. ಆದರೆ, ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ ಎಂದರು.
ಮುಂಜಾನೆ 3 ಗಂಟೆಗೆ ನಟನೊಬ್ಬ ನಿಮಗೆ ಕರೆ ಮಾಡಿ, ನನ್ನ ಮನೆಗೆ ಬಾ ಎಂದು ಕರೆದರೆ, ಒಂದು ವೇಳೆ ನೀವು ಆ ಚಿತ್ರ ಮಾಡುತ್ತಿದ್ದರೆ ಹೋಗಲೇಬೇಕು. ನೀವೇನಾದರೂ ಹೋಗದಿದ್ದರೆ, ನಿಮ್ಮನ್ನು ಆ ಸಿನಿಮಾದಿಂದಲೇ ಹೊರ ಹಾಕುತ್ತಾರೆಂದು ಮಲ್ಲಿಕಾ ಹೇಳಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply