Connect with us

LATEST NEWS

ದೇಶದಲ್ಲಿ ಧರ್ಮ ಮತ್ತು ಜಾತಿ ಆಧಾರಿತ ರಾಜಕಾರಣ ಮಿತಿ ಮೀರಿದೆ – ವರುಣ್ ಗಾಂಧಿ

ದೇಶದಲ್ಲಿ ಧರ್ಮ ಮತ್ತು ಜಾತಿ ಆಧಾರಿತ ರಾಜಕಾರಣ ಮಿತಿ ಮೀರಿದೆ – ವರುಣ್ ಗಾಂಧಿ

ಉಡುಪಿ ನವೆಂಬರ್ 13: ನನ್ನ ಹೆಸರಿನಲ್ಲಿ ಗಾಂಧಿ ಇಲ್ಲದಿದ್ದರೆ ನಾನು ಸಂಸದನಾಗಿ ಆಯ್ಕೆಯಾಗುತ್ತಿರಲಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ಣಿಪಾಲದಲ್ಲಿ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಧರ್ಮ ಮತ್ತು ಜಾತಿ ಆಧಾರಿತ ರಾಜಕಾರಣ ಮಿತಿ ಮೀರಿದೆ ಎಂದು ಹೇಳಿದರು. ನನ್ನ ಹೆಸರಿನಲ್ಲಿ ಗಾಂಧಿ ಎಂದು ಇಲ್ಲದಿದ್ದರೆ ನಾನು 29 ವರ್ಷಕ್ಕೆ ಸಂಸದನಾಗಿ ಆಯ್ಕೆಯಾಗುತ್ತಿರಲಿಲ್ಲ ಎಂದು ಹೇಳಿದರು. ಒಬ್ಬ ಫೇಮಸ್ ತಂದೆ ಅಥವಾ ರಾಜಕಾರಣಿ ಇಲ್ಲದಿದ್ದರೆ ಮಗ ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಈ ತರಹದ ಅಸಮಾನತೆಯ ಲಾಭ ಪಡೆದವರಲ್ಲಿ ನಾನು ಒಬ್ಬ ಎಂದರು.

ದೇಶದಲ್ಲಿ ಜಾತ್ಯಾತೀತ ನಿಲುವಿನ ಬಗ್ಗೆ ಒಲವು ತೋರಿದ ವರುಣ್ ಗಾಂಧಿ ದೇಶದ ಸಂಸತ್ ಈಗ ಟೆಂಪಲ್ ಆಫ್ ಡಿಬೇಟ್ ಆಗಿ ಉಳಿದಿಲ್ಲ, ಸಂಸತ್ ಸದಸ್ಯರ ಸಂಬಳ 7 ವರ್ಷದಲ್ಲಿ 5 ಬಾರಿ ಏರಿಕೆಯಾಗಿದೆ. ಸಂಸದರಿಗೆ ಕಲಾಪ, ಮಸೂದೆ, ಹಾಜರಾತಿ ಬಗ್ಗೆ ಆಸಕ್ತಿ ಇಲ್ಲ ಎಂದು ಭಾರತದ ಸಂಸದೀಯ ವ್ಯವಸ್ಥೆ ಬಗ್ಗೆ ವರುಣ್ ಗಾಂಧಿ ಬೇಸರ ವ್ಯಕ್ತಪಡಿಸಿದರು.

Facebook Comments

comments