Connect with us

    LATEST NEWS

    ನೀವು ಆಫೀಸ್ ನಲ್ಲಿದ್ದರೆ ಅಥವಾ ಆಫೀಸ್ ಗೆ ಬರುತ್ತಿದ್ದರೆ…ಮನೆಗೆ ಹೋಗಿ – ಟ್ವಿಟರ್ ಸಿಬ್ಬಂದಿಗಳಿಗೆ ಎಲಾನ್ ಮಸ್ಕ್ ಇಮೇಲ್

    ನವದೆಹಲಿ ನವೆಂಬರ್ 4: ಸಾಮಾಜಿಕ ಜಾಲತಾಣ ಟ್ವಿಟ್ಟರ್ ಕಂಪೆನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಇದೀಗ ಎಲಾನ್ ಮಸ್ಕ್ ಸಿಬ್ಬಂದಿಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಪ್ರಾರಂಭಿಸಿದ್ದು, ಟ್ವಿಟರ್ ನ ಕೆಲ ಸಿಬ್ಬಂದಿಗಳಿಗೆ ನೀವು ಆಫೀಸ್ ನಲ್ಲಿದ್ದರೆ ಅಥವಾ ಆಫೀಸ್ ಗೆ ಬರುತ್ತಿದ್ದರೆ…ಮನೆಗೆ ಹೋಗಿ ಎಂದು ಇಮೇಲ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಈ ನಡುವೆ ಭಾರತದಲ್ಲಿ ಟ್ವೀಟರ್ ಕೆಲ ಬಳಕೆದಾರರಿಗೆ ಬಂದ್ ಆಗಿದೆ.


    ಶುಕ್ರವಾರ ಬೆಳಗ್ಗೆ ಹಲವು ಟ್ವಿಟ್ಟರ್‌ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ. ಭಾರತದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಜಗತ್ತಿನೆಲ್ಲೆಡೆಯು ತೊಂದರೆ ಕಾಣಿಸಿಕೊಂಡಿರುವುದು ವರದಿಯಾಗಿದೆ.
    ಹಲವಾರು ಬಳಕೆದಾರರು, ನಮಗೆ ವೆಬ್‌ಸೈಟ್‌ಗೆ ಲಾಗ್ ಇನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಫೀಡ್ ಪುಟವನ್ನು ಮೊದಲು ಲೋಡ್ ಮಾಡಿದಾಗ ‘ಏನೋ ತಪ್ಪಾಗಿದೆ, ಆದರೆ ಚಿಂತಿಸಬೇಡಿ – ಮತ್ತೆ ಪ್ರಯತ್ನಿಸಿ’ ಎನ್ನುವ ಸಾಲುಗಳು ಕಾಣಿಸಿಕೊಳ್ಳುತ್ತಿವೆ.
    ವರದಿಗಳ ಪ್ರಕಾರ ಸಮಸ್ಯೆಯು ಬೆಳಿಗ್ಗೆ 3 ಗಂಟೆ ಸುಮಾರಿಗೆ ಪ್ರಾರಂಭವಾಗಿದ್ದು, ಬೆಳಿಗ್ಗೆ 7ರ ಸುಮಾರಿಗೆ ತೊಂದರೆ ಮತ್ತಷ್ಟು ಉಲ್ಬಣಗೊಂಡಿದೆ.

    ಅವರು ಇಂದು ಟ್ವಿಟ್ಟರ್‌ ಉದ್ಯೋಗಿಗಳ ಸಾಮೂಹಿಕವಾಗಿ ವಜಾ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದಾರೆ. ಈ ಸಂಬಂಧ ಉದ್ಯೋಗಿಗಳಿಗೆ ಕಳುಹಿಸಲಾದ ಆಂತರಿಕ ಪತ್ರದಲ್ಲಿ ‘ವಜಾಗೊಳಿಸುವಿಕೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಲಾಗಿದೆ. ಟ್ವಿಟ್ಟರ್‌‌ನ ಕಛೇರಿಗಳಿಗೆ ಉದ್ಯೋಗಿಗಳ ಪ್ರವೇಶವನ್ನು ‘ತಾತ್ಕಾಲಿಕವಾಗಿ’ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ಹೇಳಿದ್ದು, ಆಂತರಿಕ ಮೆಮೊದ ಪ್ರಕಾರ ನವೆಂಬರ್ 4ರ ಬೆಳಿಗ್ಗೆ 9 ಗಂಟೆಗೆ ಉದ್ಯೋಗಿಗಳಿಗೆ ಕೆಲಸದಿಂದ ವಜಾಗೊಳ್ಳಲಾಗಿದೆಯೇ, ಇಲ್ಲವೇ ಎಂಬುದನ್ನು ತಿಳಿಸಲಾಗುವುದು ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply