KARNATAKA
ಹಿಂದೂಗಳು ಮುಸ್ಲಿಮರಾಗಿ ಮತಾಂತರವಾದರೆ ಅಂಬೇಡ್ಕರ್ ಗೆ ಎಲ್ಲಿ ಜಾಗ ಸಿಗುತ್ತದೆ: ಸಿ.ಟಿ.ರವಿ

ಚಿಕ್ಕಮಗಳೂರು, ಡಿಸೆಂಬರ್ 17 : ‘ಹಿಂದೂಗಳು ಮುಸ್ಲಿಮರಾಗಿ ಮತಾಂತರವಾದರೆ ಅಂಬೇಡ್ಕರ್ ಗೆ ಎಲ್ಲಿ ಜಾಗ ಸಿಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರಿಶ್ಚಿಯನ್ ಗೆ ಪರಿವರ್ತನೆಯಾದರೆ ಸಿದ್ದರಾಮಯ್ಯನವರಿಗೆ ಎಲ್ಲಿ ಜಾಗ ಇದೆ’ ಎಂದು ಪ್ರಶ್ನಿಸಿದರು. ‘ಹಿಂದೂಗಳು ಬೌದ್ಧರು, ವೈಷ್ಣವರಾದರೆ ಅಂಬೇಡ್ಕರ್, ರಾಮನಿಗೆ ಜಾಗ ಸಿಗುತ್ತದೆ. ಜೈನರ ಮನೆಯಲ್ಲಿ ರಾಮ, ಗಣಪತಿಗೆ ಜಾಗ ಇದೆ. ಇಸ್ಲಾಮಿಗೆ ಪರಿವರ್ತನೆಯಾದರೆ ಅಂಬೇಡ್ಕರ್, ಬುದ್ಧನಿಗೂ ಜಾಗವಿಲ್ಲ’ ಎಂದರು.

ಮತಾಂತರ ಮತಗಳ ಗಳಿಕೆಗೆ ಇರೋ ಸಾಧನ ಅಲ್ಲ. ಮತಾಂತರ ದೇಶಾಂತರಕ್ಕೆ ಸಮ ಅಂತ ಗಾಂಧಿಜೀ ಹೇಳಿದ್ದರು. ಕಾಂಗ್ರೆಸ್ ನಮ್ದು ಗೋಡ್ಸೆ ಹಿಂದುತ್ವ ಅಲ್ಲ, ಗಾಂಧಿ ಹಿಂದುತ್ವ ಅನ್ನುತ್ತಾರೆ. ಮತಾಂತರದ ಬಗ್ಗೆ ಗಾಂಧಿ ಏನು ಹೇಳಿದ್ದರು ಅಂತ ಕಾಂಗ್ರೆಸ್ ಇತಿಹಾಸ ಓದಲಿ. ಸಿದ್ದರಾಮಯ್ಯನವರೇ ನೀವೂ ಒಮ್ಮೆ ಇತಿಹಾಸ ಓದಿ ಎಂದು ಸವಾಲು ಹಾಕಿದ್ದಾರೆ.