LATEST NEWS
ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ವಿಜಯ ಬ್ಯಾಂಕ್ ವಿಲೀನ ಇಲ್ಲ – ವೀರಪ್ಪ ಮೊಯಿಲಿ
ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ವಿಜಯ ಬ್ಯಾಂಕ್ ವಿಲೀನ ಇಲ್ಲ – ವೀರಪ್ಪ ಮೊಯಿಲಿ
ಮಂಗಳೂರು ಮಾರ್ಚ್ 2: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ವಿಜಯಬ್ಯಾಂಕ್ ವಿಲೀನ ರದ್ದು ಮಾಡಲಾಗುವುದು ಎಂದಪ ಮಾಜಿ ಸಂಸದ ವೀರಪ್ಪ ಮೊಯಿಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ವಿಜಯ ಬ್ಯಾಂಕ್ ನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಲು ಹೊರಟಿರುವುದು ಖಂಡನೀಯ ಎಂದು ಹೇಳಿದ ಅವರು. ವಿಜಯ ಬ್ಯಾಂಕ್ ವಿಲೀನ ಮಾಡದಂತೆ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೇನೆ.
ಈ ವಿಚಾರ ಹಣಕಾಸು ಸಮಿತಿಗೆ ಕೂಡ ಬರುವುದಿಲ್ಲವಾದರು ಬಿಜೆಪಿಯು ಬ್ಯಾಂಕ್ ವಿಲೀನ ಮಾಡುತ್ತಿದೆ. ಮುಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದ್ದು, ವಿಜಯ ಬ್ಯಾಂಕ್ ವಿಲೀನ ಮಾಡಲು ಬಿಡುವುದಿಲ್ಲ ಎಂದರು.