Connect with us

  KARNATAKA

  ಕಾಂಗ್ರೆಸ್‌ ಸೇರಿದಕ್ಕೆ ಮಗಳನ್ನು ಕಳೆದುಕೊಂಡೆ : ಯತ್ನಾಳ್‌ ಎದುರು ಕಣ್ಣೀರಾದ ನೇಹಾ ತಂದೆ..!

  ಹುಬ್ಬಳ್ಳಿ : ಕಾಂಗ್ರೆಸ್‌ ಸೇರಿದ್ದಕ್ಕೆ ಮಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಹುಬ್ಬಳ್ಳಿಯ ಕಾಲೇಜಿನಲ್ಲಿ ಮುಸ್ಲಿಂ ಯುವಕನಿಂದ ಕೊಲೆಯಾಗಿರುವ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ತಂದೆ ಕಾಂಗ್ರೆಸ್‌ ಕಾರ್ಪೋರೇಟರ್‌ ನಿರಂಜನ್‌ ಹಿರೇಂಟ ಅಳಲು ತೋಡಿಕೊಂಡಿದ್ದಾರೆ.


  ನಾನು ಮಹೇಶ್ ಟೆಂಗಿನಕಾಯಿ (ಬಿಜೆಪಿ ಶಾಸಕ) ಶಿಷ್ಯ, ಆ ಕಡೆ ಹೋಗಿದ್ದಕ್ಕೆ ಮಗಳನ್ನು ಕಳೆದುಕೊಂಡೆ ಎಂದು ತನ್ನನ್ನು ಸಾಂತ್ವನಿಸಲು ಬಂದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಜತೆ ಅಳಲುತೋಡಿಕೊಂಡಿರುವ ನಿರಂಜನ್‌ ಹಿರೇಮಠ ಪರೋಕ್ಷವಾಗಿ ತನ್ನ ಪಕ್ಷವನ್ನು ದೂಷಿಸಿದ್ದಾರೆ.
  ನಾನು ಸಾರ್ವಜನಿಕ ಬದುಕಿನಲ್ಲಿ ಇರೋನು. ನನಗೆ ಹೀಗೆ ಆದರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ. ಆಗ ಯತ್ನಾಳ್‌ ನಿಮ್ಮ ಪಕ್ಷದವರು ಯಾರೂ ಇದನ್ನು ಖಂಡನೆ ಮಾಡಿಲ್ಲ ಎಂದು ಹೇಳಿದ್ದು, ನಿರಂಜನ್‌ ಹಿರೇಮಠ ನೀವೇ ಮನಸು ಮಾಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.

  ಹುಬ್ಬಳ್ಳಿ ನಗರದ ಬಿಡನಾಳದಲ್ಲಿರುವ ನಿರಂಜನ್ ಹಿರೇಮಠ ನಿವಾಸಕ್ಕೆ ಶಾಸಕ ಯತ್ನಾಳ್ ಭೇಟಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಲವ್ ಜಿಹಾದ್​ನ ದೊಡ್ಡ ಜಾಲ ಇದೆ. ಹಿಂದೂ ಯುವತಿಯರನ್ನು ಟಾರ್ಗೆಟ್​ ಮಾಡಿ ಲವ್​ ಮಾಡಿ ಮತಾಂತರ ಮಾಡಲಿಕ್ಕೆ 10-20 ಲಕ್ಷ ರೂ. ಹಣ ಕೊಡುವ ಕೆಲಸ ಆಗುತ್ತಿದೆ. ಆದರೆ ನೇಹಾ ಹಿರೇಮಠ ಯಾವುದೇ ಆಮಿಷಕ್ಕೂ ಒಳಗಾಗಿರಲಿಲ್ಲ ಎಂದಿದ್ದಾರೆ.

  ದೇಶದಲ್ಲಿ ಮುಸ್ಲಿಂ ಯುವತಿಯರ ಕೊಲೆಯಾಗಿದ್ಯಾ. ಮುಸ್ಲಿಂ ಯುವತಿ ಕೈಕೊಟ್ರೆ ಹಿಂದೂಗಳು ರೈಲ್ವೆ ಹಳಿಗೆ ಬಿದ್ದು ಸಾಯುತ್ತಾರೆ ಹೊರತು ಯಾರು ಕೂಡ ಕೊಲೆ ಮಾಡುವಂತಹ ಹಲ್ಕಾ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
  ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಬೇಜಾವಾಬ್ದಾರಿತನದ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರಿಗೆ ಮಾನ‌ ಮರ್ಯಾದೆ ಇದೆಯಾ? ಘಟನೆ ಬಗ್ಗೆ ಯಾವುದೇ ಮಾಹಿತಿ ತೆಗೆದುಕೊಳ್ಳದೇ ಈ ರೀತಿ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ಇದೆ. ವೋಟ್ ಬ್ಯಾಂಕ್ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಇದೇ ರೀತಿ ಘಟನೆಗಳು ನಡೆದರೆ ರಕ್ಷಣೆ ಮಾಡುವವ ಯಾರು. ನಿಮಗೆ ತಾಕತ್ ಇದ್ದರೆ ಇಂತವರನ್ನ ಎನ್​ಕೌಂಟರ್ ಮಾಡಿ ಎಂದು ಆಗ್ರಹಿಸಿದ್ದಾರೆ.
  ನೇಹಾ ಕುಟುಂಬಸ್ಥರ ಜೊತೆ ನಾವೂ ಕೂಡ ಕಾನೂನು ಹೋರಾಟ ಮಾಡುತ್ತೇವೆ. ಆರೋಪಿಗೆ ಮೂರು ತಿಂಗಳಲ್ಲಿ‌ ಶಿಕ್ಷೆ ನೀಡಬೇಕು ಅನ್ನೋದು‌ ಸುಪ್ರೀಂ‌ ಕೋರ್ಟ್ ನಿಯಮ‌ ಇದೆ. ಮೂರು ತಿಂಗಳಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

   

  Share Information
  Advertisement
  Click to comment

  You must be logged in to post a comment Login

  Leave a Reply