LATEST NEWS
ನಾನು ಕಾರ್ಕಳ ಟಿಕೆಟ್ ಆಕಾಂಕ್ಷಿ, ಹರ್ಷ ಮೊಯಿಲಿ ಬಗ್ಗೆ ಗೊತ್ತಿಲ್ಲ : ಮುನಿಯಾಲು ಉದಯ ಕುಮಾರ್
ನಾನು ಕಾರ್ಕಳ ಟಿಕೆಟ್ ಆಕಾಂಕ್ಷಿ, ಹರ್ಷ ಮೊಯಿಲಿ ಬಗ್ಗೆ ಗೊತ್ತಿಲ್ಲ : ಮುನಿಯಾಲು ಉದಯ ಕುಮಾರ್
ಉಡುಪಿ, ಮಾರ್ಚ್ 16 : ಸಂಸದ ವೀರಪ್ಪ ಮೊಯ್ಲಿ ವಿವಾದಾತ್ಮಕ ಟ್ವೀಟ್ ವಿಚಾರ ಕುರಿತು ಉಡುಪಿಯಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಮುನಿಯಾಲು ಅವರು ವೀರಪ್ಪ ಮೊಯ್ಲಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಲಾರೆ. ಅವರು ರಾಷ್ಟ್ರೀಯ ನಾಯಕರು. ನಾನೂ ಕಾರ್ಕಳ ಕ್ಷೇತ್ರ ಟಿಕೆಟ್ ಆಕಾಂಕ್ಷಿ. ಕಾಂಗ್ರೆಸ್ ಪಕ್ಷದ ಸಂಪ್ರದಾಯದಂತೆ ಅರ್ಜಿ ಹಾಕಿರುವೆ.
ಪಕ್ಷ ನನ್ನ ಕೆಲಸ, ಸಂಘಟನೆ ಮನಗಂಡು ಅವಕಾಶ ಕೊಡುತ್ತದೆ ಎನ್ನುವ ಅಚಲ ನಂಬಿಕೆ ಇದೆ ಎಂದ ಅವರು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರತಿಕ್ರೀಯಿಸಿದ್ದಾರೆ.
ವೀರಪ್ಪ ಮೊಯ್ಲಿ ಹಾಗೂ ಇನ್ನಿತರ ನಾಯಕರೂ ಇದಕ್ಕೆ ಅವಕಾಶ ಕೊಡುತ್ತಾರೆ ಎನ್ನುವ ನಂಬಿಕೆ ಇದ್ದು, ಕಾರ್ಕಳದಲ್ಲಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ ಯಾಗಿದೆ ಎಂದರು.
ನಾನು ಅಜ್ಜನ ಕಾಲದಿಂದಲೂ ಕಾಂಗ್ರೆಸ್ ಕುಟುಂಬದಿಂದ ಬಂದವನು.
ನನ್ನ ಸಂಘಟನೆ ಕೆಲಸ ನೋಡಿ ಚುನಾವಣೆಗೆ ಅರ್ಜಿ ಸಲ್ಲಿಸುವಂತೆ ಹಿತೈಷಿಗಳು ತಿಳಿಸಿದ್ದಾರೆ.
ಕಾಂಟ್ರ್ಯಾಕ್ಟ್ ಕೂಡಾ ಒಂದು ಉದ್ಯೋಗವೇ.ಎಲ್ಲರೂ ಒಂದೊಂದು ಉದ್ಯೋಗ ಹೊಂದಿರುತ್ತಾರೆ ಎಂದು ಮುನಿಯಾಲು ಪ್ರತಿಕ್ರೀಯಿಸಿದ್ದಾರೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಗುತ್ತಿಗೆದಾರರು ಮೂಗು ತೂರಿಸುತ್ತಿದ್ದಾರೆ.
ಮೊಯ್ಲಿ ಪುತ್ರ ಹರ್ಷ ಮೊಯ್ಲಿಯೂ ಕಾರ್ಕಳ ಟಿಕೆಟ್ ಆಕಾಂಕ್ಷಿ ಆಗಿರುವ ಹಿನ್ನೆಲೆಯಲ್ಲಿ ಟ್ವೀಟ್ ಮೂಲಕ ಪಕ್ಷದ ಆಂತರಿಕ ವಿಚಾರವಾಗಿ ಕೆದಕಿದ್ದ ವೀರಪ್ಪ ಮೊಯ್ಲಿ ಅವರು ಗುತ್ತಿಗೆದಾರ ಮುನಿಯಾಲು ಶೆಟ್ಟಿಗೆ ಟಾಂಗ್ ನೀಡಿದ್ದರು.
You must be logged in to post a comment Login