LATEST NEWS
ರೋಷನ್ ಬೇಗ್ ವಿರುದ್ದ I AM Modi ಕ್ಯಾಂಪೇನ್

ರೋಷನ್ ಬೇಗ್ ವಿರುದ್ದ I AM Modi ಕ್ಯಾಂಪೇನ್
ಮಂಗಳೂರು ಅಕ್ಟೋಬರ್ 13: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ವಿರುದ್ದ ಐ ಯಾಮ್ ಮೋದಿ ಕ್ಯಾಂಪೇನ್ ಆರಂಭಿಸಲಾಗುವುದೆಂದು ಚಿಂತಕ ಹಾಗೂ ಅಂಕಣಕಾರು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಅವರು ಒಂದು ಪಕ್ಷಕ್ಕೆ ಪ್ರಧಾನಿ ಅಲ್ಲ ಸಮಸ್ತ ರಾಷ್ಟ್ರಕ್ಕೆ ಪ್ರಧಾನಿ. ಪ್ರಧಾನಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದು ಹೇಳಿದರು. ಸಚಿವ ರೋಷನ್ ಬೇಗ್ ಅವರ ಹೇಳಿಕೆಯನ್ನು ಕನ್ನಡಿಗನಾಗಿ ಖಂಡಿಸುವುದಾಗಿ ತಿಳಿಸಿದ ಅವರು ಸಚಿವರೊಬ್ಬರು ಈ ರೀತಿಯ ಭಾಷೆ ಬಳಸಿ ಪ್ರಧಾನಿ ಅವರನ್ನು ನಿಂದಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಪ್ರಧಾನಿ ಅವರನ್ನು ತುಚ್ಯವಾಗಿ ನಿಂದಿಸುವ ಪದ್ದತಿ ಕರ್ನಾಟಕಕ್ಕೆ ಯಾಕೆ ಬಂತು ಅನ್ನುವುದೇ ಗೊತ್ತಾಗುತ್ತಿಲ್ಲ ಎಂದು ವಿಷಾಧಿಸಿದ ಅವರು ರೋಷನ್ ಬೇಗ್ ಅವರ ಹೇಳಿಕೆಯನ್ನು ಖಂಡಿಸಿ ಐ ಯಾವ್ ಮೋದಿ ಕ್ಯಾಂಪೇನ್ ನಾಳೆಯಿಂದ ಆರಂಭಿಸುವುದಾಗಿ ಅವರು ತಿಳಿಸಿದರು. ಈ ಹೊತ್ತಿನಿಂದ ನಾನು ಕೂಡ ಮೋದಿ ಎಂದು ಹೇಳಿದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಯಾಂಪೇನ್ ಆರಂಭಿಸಿ ಎಲ್ಲರೂ ತಮ್ಮ ಡಿಪಿಯಲ್ಲಿ ಮೋದಿ ಅವರ ಚಿತ್ರ ಹಾಕುವಂತೆ ಕರೆ ನೀಡಿದರು.
ನನ್ನ ವಿರುದ್ದ ಸಚಿವ ರಮಾನಾಥ ರೈ ಇದೇ ರೀತಿಯ ಭಾಷೆ ಬಳಸಿ ನಿಂದಿಸಿದ್ದರು. ಆದರೆ ಅವರ ಹೇಳಿಕೆಯನ್ನು ನಾನು ನಿರ್ಲಕ್ಷಿಸಿದ್ದೆ ಕಾಂಗ್ರೇಸ್ ಪಕ್ಷದ ಹಿರಿಯರು ರೈ ಅವರ ಕಿವಿ ಹಿಂಡಿ ಬುದ್ದಿವಾದ ಹೇಳುತ್ತಾರೆ ಅಂದುಕೊಂಡಿದ್ದೆ ಆದರೆ ಈ ರೀತಿ ಆಗಲಿಲ್ಲ , ಈ ರೀತಿಯ ಅಸಂವಿಧಾನಿಕ ಪದ ಬಳಕೆ ಹೆಚ್ಚಾಗುತ್ತಿರುವುದು ಕರ್ನಾಟಕ ಪರಂಪರೆ ಸಂಸ್ಕೃತಿಗೆ ಅವಮಾನ ಎಂದು ಹೇಳಿದರು.