LATEST NEWS
ನಡುರಸ್ತೆಯಲ್ಲಿ ಯುವತಿಯ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ ಯುವಕ….!!
ಹೈದರಾಬಾದ್ ಅಗಸ್ಟ್ 09: ಹೈದರಾಬಾದ್‌ನ ಜವಾಹರ್ ನಗರ ಪ್ರದೇಶದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಯುವತಿಯ ಮೇಲೆ ಹಲ್ಲೆ ನಡೆಸಿ ಆಕೆಯನ್ನು ವಿವಸ್ತ್ರಗೊಳಿಸಿದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಬಟ್ಟೆ ಅಂಗಡಿಯಿಂದ ಹಿಂತಿರುಗುತ್ತಿದ್ದಾಗ ವ್ಯಕ್ತಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ವರದಿಯಾಗಿದೆ. ಅವಳು ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಈ ವೇಳೆ ವ್ಯಕ್ತಿಯ ಆಕೆಯ ಬಟ್ಟೆಯನ್ನು ಹರಿದು ಹಾಕಿದ್ದು, ಆಕೆಯ ಮೇಲೆ ಹಲ್ಲೆಗೆ ಮಾಡಿದ್ದಾನೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮತ್ತೊಬ್ಬ ಮಹಿಳೆ ಆ ವ್ಯಕ್ತಿಯನ್ನು ತಡೆದು ನಿಲ್ಲಿಸಲು ಯತ್ನಿಸಿದ್ದಾರೆ.
ಯುವಕನ ಜೊತೆ ಆತನ ತಾಯಿ ಇದ್ದರೂ ಈ ಗಲಾಟೆಯನ್ನು ನಿಲ್ಲಿಸಲು ಪ್ರಯತ್ನಿಸಿಲ್ಲ ಎನ್ನುವುದು ವಿಡಿಯೋದಲ್ಲಿ ತಿಳಿದು ಬಂದಿದ್ದು, ಮಹಿಳೆಯು ರಸ್ತೆಯಲ್ಲಿ ಸ್ವಲ್ಪ ಸಮಯದವರೆಗೆ ಬೆತ್ತಲೆಯಾಗಿದ್ದಳು ಎಂದು ವರದಿಯಾಗಿದೆ, ಬಳಿಕ ಮಹಿಳೆಯರು ಆಕೆಗೆ ಮೈಮುಚ್ಚಲು ಟಾರ್ಪಾಲ್ ನೀಡಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
You must be logged in to post a comment Login