KARNATAKA
ಶ್ರೀರಂಗಪಟ್ಟಣದಲ್ಲಿ ಹುಚ್ಚವೆಂಕಟ ಪುಂಡಾಟ…ವಿಡಿಯೋ ವೈರಲ್

10 ರೂಪಾಯಿ ಕೊಡಿ ಅಂತ ಜನರೇದರು ಕಣ್ಣೀರು……
ಬೆಂಗಳೂರು ಜೂ.8: ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುವ ಹುಚ್ಚ ವೆಂಕಟ್ ಈಗ ಏಕಾಏಕಿ ಶ್ರೀರಂಗಪಟ್ಟದಲ್ಲಿ ಪ್ರತ್ಯಕ್ಷರಾಗಿದ್ದು, ಜನರ ಹತ್ತಿರ ಊರಿಗೆ ಹಣ ಕೋಡಿ ಎಂದು ಜನರ ಬಳಿ ಕಣ್ಣೀರಿಟ್ಟಿದ್ದಾರೆ.
ನಿನ್ನೆ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಹುಚ್ಚವೆಂಕಟ್ ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ರಾತ್ರಿಯಿಡೀ ಮಲಗಿದ್ದರು. ನಂತರ ದೇವಾಲಯದ ಮುಂಭಾಗದಲ್ಲಿ ಕಾರು ನಿಲ್ಲಿಸಿ ಶ್ರೀರಂಗಪಟ್ಟಣದಲ್ಲಿ ಅಲೆದಾಟ ನಡೆಸಿದ್ದರು.

ರಸ್ತೆಯಲ್ಲಿ ಎಲ್ಲರಿಗೂ ಬಯ್ಯತ್ತಾ ಹುಚ್ಚ ವೆಂಕಟ್ ಪುಂಡಾಟ ನಡೆಸಿದ್ದಾರೆ. ನಂತರ ಊರಿಗೆ ಹೋಗಲು 10 ರೂಪಾಯಿ ಕೊಡಿ ಎಂದು ಜನರ ಬಳಿ ಕಣ್ಣೀರಿಟ್ಟಿದ್ದಾರೆ. ಹುಚ್ಚ ವೆಂಕಟ್ ಸ್ಥಿತಿ ಕಂಡು ಮರುಗಿದ ಸ್ಥಳೀಯರಿಂದ ಹಣ ನೀಡಿ ಸಹಾಯ ಮಾಡಿದ್ದಾರೆ. ಕಡೆಗೆ ಪೊಲೀಸರ ಸಹಾಯದಿಂದ ಶ್ರೀರಂಗಪಟ್ಟಣದಿಂದ ಅವರನ್ನು ಕಳುಹಿಸಕೊಡಲಾಗಿದೆ.