LATEST NEWS
ಕಾಸರಗೋಡು ಪಾಸ್ ಗಾಗಿ ಮೂರು ಹೆಲ್ಪ್ ಡೆಸ್ಕ್ – ಕೋಟ
ಮಂಜೇಶ್ವರ ಮಂಡಲ ಬಿಜೆಪಿಯಿಂದ ತಲಪಾಡಿಯಲ್ಲಿ ಪ್ರತಿಭಟನೆ
ಮಂಗಳೂರು, ಜೂನ್ 8: ಕಾಸರಗೋಡಿನಿಂದ ಮಂಗಳೂರಿಗೆ ತೆರಳಲು ಪಾಸ್ ಸಿಗದೆ ಕಂಗಾಲಾಗಿರುವ ಜನರಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ ನೀಡಿದ್ದಾರೆ. ತಲಪಾಡಿ ಗಡಿಯಲ್ಲಿ ಮೂರು ಹೆಲ್ಪ್ ಡೆಸ್ಕ್ ತೆರೆದು ಸ್ಥಳದಲ್ಲಿಯೇ ಪಾಸ್ ವ್ಯವಸ್ಥೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಕಾಸರಗೋಡಿನಿಂದ ಸಾವಿರಾರು ಜನರು ಉದ್ಯೋಗಕ್ಕಾಗಿ ಮಂಗಳೂರಿಗೆ ಬರುತ್ತಿದ್ದಾರೆ. ಲಾಕ್ ಡೌನ್ ಕಾರಣದಿಂದ ತೊಂದರೆ ಅನುಭವಿಸುತ್ತಿರುವ ಉದ್ಯೋಗಿಗಳಿಗೆ ಪಾಸ್ ವ್ಯವಸ್ಥೆ ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೇಳಿತ್ತು. ಅದರಂತೆ, ಎರಡು ಸಾವಿರಕ್ಕೂ ಹೆಚ್ಚು ಮಂದಿ ಪಾಸ್ ಗಾಗಿ ನೋಂದಣಿ ಮಾಡಿದ್ದರು. ಆದರೆ, ಹೆಚ್ಚಿನ ಮಂದಿ ಪಾಸ್ ಸಿಗದೆ ಪರದಾಟ ಅನುಭವಿಸಿದ್ದಾರೆ.
ಇಂದು ಬೆಳಗ್ಗೆ ಮಂಜೇಶ್ವರ ಮಂಡಲ ಬಿಜೆಪಿ ವತಿಯಿಂದ ತಲಪಾಡಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜನರ ಬವಣೆಯನ್ನು ಎತ್ತಿತೋರಿಸುವ ಕೆಲಸ ನಡೆದಿತ್ತು.