Connect with us

    LATEST NEWS

    ಉಡುಪಿ ಇಂದು ಕೊರೊನಾ ಸೊಂಕಿತರು 45….

    ಸೊಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು 215

    ಉಡುಪಿ ಜೂನ್ 8: ಉಡುಪಿಯಲ್ಲಿ ಇಂದು ಮತ್ತೆ 45 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ದೃಢಪಟ್ಟ ಕೊರೊನಾ ಸೊಂಕಿತರು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ. ಇಂದಿನ 45 ಪ್ರಕರಣಗಳೊಂದಿಗೆ ಉಡುಪಿಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ.

    ಇನ್ನೊಂದೆಡೆ ಒಂದು ಸಂತೋಷದ ಸುದ್ದಿ ಅಂದರೆ ಇಂದು ಒಂದೇ ದಿನ 215 ಮಂದಿ ಕೊರೊನಾ ಸೊಂಕಿನಿಂದ ಗುಣಮುರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 318ಕ್ಕೆ ಏರಿಕೆಯಾಗಿದೆ.  ಉಡುಪಿಯಲ್ಲಿ ಸದ್ಯ 628 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply