LATEST NEWS
ಪ್ರಕಾಶ್ ರೈ ನನ್ನ ಎಕ್ಕಡಕ್ಕೆ ಸಮಾನ – ಹುಚ್ಚ ವೆಂಕಟ್

ಪ್ರಕಾಶ್ ರೈ ನನ್ನ ಎಕ್ಕಡಕ್ಕೆ ಸಮಾನ – ಹುಚ್ಚ ವೆಂಕಟ್
ಮಂಗಳೂರು ಮೇ 04: ಖ್ಯಾತ ನಟ ಪ್ರಕಾಶ್ ರೈ ವಿರುದ್ದ ಹುಚ್ಚ ವೆಂಕಟ್ ಗರಂ ಆಗಿದ್ದಾರೆ. ಪ್ರದಾನಿ ನರೇಂದ್ರ ಮೋದಿ ವಿರುದ್ದ ಹೇಳಿಕೆಗಳನ್ನು ನೀಡುತ್ತಿರುವ ಪ್ರಕಾಶ ರೈ ವಿರುದ್ದ ಕಿಡಿಕಾರಿದ್ದಾರೆ. ಕೇವಲ ಪ್ರಚಾರಕ್ಕೆ ಮೋದಿ ವಿರುದ್ದ ಪ್ರಕಾಶ್ ರೈ ಮಾತನಾಡುತ್ತಾನೆ. ಪ್ರಕಾಶ್ ರೈ ಮಾತ್ರನಾ? ನಾಯಿನು ಕೂಡ ಡೈಲಾಗ್ ಹೊಡೆಯುತ್ತೆ . ಪ್ರಕಾಶ್ ರೈ ನನ್ನ ಎಕ್ಕಡಕ್ಕೆ ಸಮಾನ ಎಂದು ಹರಿಹಾಯ್ದರು.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕಾಶ್ ರೈ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಕಾಶ್ ರೈ ಅವರನ್ನು ಪ್ರತಿಕಾಗೋಷ್ಠಿಯುದ್ದಕ್ಕೂ ಏಕ ವಚನದಲ್ಲೇ ಸಂಬೋಧಿಸಿದ ಹುಚ್ಚಾ ವೆಂಕಟ್ , ” ನೀನು ನೀಡೊದು ದರಿದ್ರ ಸ್ಟೇಟ್ ಮೆಂಟ್. ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ. ನಿನ್ನ ಮಾತಿನಿಂದ ಮೋದಿ ಅವರಿಗೆ ಏನು ಆಗಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರದಾನಿ ಮೋದಿ ಜನರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಸಮಾಜಕ್ಕೆ ಪ್ರಕಾಶ ರೈ ಕೊಡುಗೆ ಏನು? ಜನರಿಗೆ ಎಷ್ಟು ದುಡ್ಡು ಕೊಟ್ಟಿದ್ದಿ? ಎಷ್ಟು ಜನಕ್ಕೆ ಊಟ ಹಾಕಿದ್ದಿ? ಮೋದಿ ಹೆಸರು ಹೇಳಿಕೊಂಡು ಪ್ರಸಿದ್ದಿ ಪಡೆಯುತ್ತಿದ್ದಿ ಎಂದು ದೂರಿದರು.
ನಾನು ಆರ್ ಆರ್ ನಗರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದೇನೆ. ಚಪ್ಪಲಿ ಚಿಹ್ನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಗಂಡು ಮಕ್ಕಳ ಚಪ್ಪಲಿ ಚಿಹ್ನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಚುನಾವಣೆಗೆ ನಾನು ಹೆಣ್ಣು ಮಕ್ಕಳ ಚಪ್ಪಲಿ ಚಿಹ್ನೆ ಬಯಸಿದ್ದೆ ಆದರೆ ಅದು ಸಿಗಲಿಲ್ಲ ಎಂದು ಹೇಳಿದರು.
ಮುಂದೆ ಮಂಡ್ಯ ದಲ್ಲಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದೆನೆ ಎಂದ ಅವರು ನಾನು ಪ್ರದಾನಿಯಾಗುತ್ತೇನೆ. ನನ್ನನ್ನು ಸೋಲಿಸಿದರೆ ರಾಜ್ಯವನ್ನು ಮಾರಿದಂತೆ ಎಂದು ಹೇಳಿದ ಅವರು ಅತ್ಯಚಾರಿಗೆ ನೇಣಿಗೆ ಏರಿಸಬೇಕು ಎಂದು ಹೇಳಿದ್ದು ನಾನು. ಅದನ್ನು ಪ್ರದಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು