KARNATAKA
ಹುಬ್ಬಳ್ಳಿ : ರೈಲು ಸೇವೆಯಲ್ಲಿ ಬದಲಾವಣೆ, ಕೆಲವು ರೈಲು ಸಂಚಾರ ರದ್ದು..!
ಹುಬ್ಬಳ್ಳಿ : ನಿಡವಂದ ಯಾರ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೇ ವಿಭಾಗ ಮಾಹಿತಿ ನೀಡಿದೆ.
ರೈಲು ಸಂಚಾರ ರದ್ದು:
ನವೆಂಬರ್ 23 ರಂದು ತುಮಕೂರು-ಬಾಣಸವಾಡಿ ಮೆಮು ವಿಶೇಷ ರೈಲು (ರೈಲು ಸಂಖ್ಯೆ 06512), ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು (ರೈ.ಸಂ. 16239) ಮತ್ತು ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್ ಪ್ರೆಸ್ (ರೈ.ಸಂ.16240) ರೈಲುಗಳ ಸಂಚಾರವನ್ನು ರದ್ದು ಮಾಡಲಾಗುತ್ತಿದೆ.
ರೈಲು ಸಂಚಾರ ಭಾಗಶಃ ರದ್ದು:
ನವೆಂಬರ್ 23 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06571) ರೈಲು ಸೇವೆಯನ್ನು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06576) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.
ನವೆಂಬರ್ 23 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (ರೈಲು ಸಂಖ್ಯೆ 06575) ರೈಲು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06572) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.
ರೈಲುಗಳ ನಿಯಂತ್ರಣ:
ನವೆಂಬರ್ 22 ರಂದು ಹೊರಡುವ ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 20 ನಿಮಿಷ, ನವೆಂಬರ್ 24 ರಂದು ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 30 ನಿಮಿಷ ಮತ್ತು ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 120 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ತಡವಾಗಿ ಆರಂಭ:
ನವೆಂಬರ್ 24 ರಂದು ಪ್ರಾರಂಭವಾಗುವ ಕೆಎಸ್ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಡೈಲಿ ಎಕ್ಸ್ ಪ್ರೆಸ್ (12725) ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ 30 ನಿಮಿಷ ಮತ್ತು ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ ಸಿಟಿ ಡೈಲಿ ಎಕ್ಸ ಪ್ರೆಸ್ (16579) ರೈಲು ಯಶವಂತಪುರದಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.