KARNATAKA
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯ ಸರ್ಕಾರ ಹೇಗೆ ತೆರಿಗೆ ಸಂಗ್ರಹಿಸುತ್ತದೆ ?
ಪೆಟ್ರೋಲ್ ಮತ್ತೆ ಡೀಸೆಲ್ ದರ ದಿನೇ ದಿನೇ ಏರುತ್ತಲೇ ಇದೆ. ಮೊನ್ನೆ ಏನೋ ಹಬ್ಬ ಇದೆ ಅಂತ ಸರಕಾರ ದರವನ್ನು ಸ್ವಲ್ಪ ಕಡಿಮೆ ಮಾಡಿ , ಸಂಚಾರಕ್ಕೆ ದುಡ್ಡು ವ್ಯಯಿಸಿ ಬೆಂದ ಜನತೆಗೆ ತುಸು ನೆಮ್ಮದಿಯನ್ನು ನೀಡಿದ್ದಾರೆ. ಆದರೆ ಏಕೆ ಇದರ ಇಷ್ಟು ಏರಿಳಿತವಾಗುತ್ತಿದೆ ಅಂತ ಯೋಚನೆ ಮಾಡಿದ್ದೀರಾ ? ಇದರ ಬಗ್ಗೆ ಒಂದಿಷ್ಟು ಮಾಹಿತಿ ಕೊಡುವ ನಮ್ಮ ಸಣ್ಣ ಪ್ರಯತ್ನ.
ಬಲ್ಲ ಮೂಲಗಳ ಪ್ರಕಾರ 30-09-2021 ವರೆಗೆ 9,720 ಕೋಟಿ ತೆರಿಗೆಯನ್ನು ಪೆಟ್ರೋಲ್ ಮತ್ತೆ ಡೀಸೆಲ್ ಮೇಲೆ ಸಂಗ್ರಹಿಸಲಾಗಿದೆ. ಆದರೆ ಕಳೆದ ವರ್ಷ ಇದೇ ತೆರಿಗೆ ಸುಮಾರು ೬,೫೪೯ ಕೋಟಿ ಇತ್ತು ಎಂಬುದು ಗಮನಿಸಬೇಕಾದ ಸಂಗತಿ. ಅಂದರೆ ಈ ವರ್ಷ 3,181 ಕೋಟಿ ತೆರಿಗೆ ಹೆಚ್ಚುವರಿಯಾಗಿ ಸಂಗ್ರಹಿಸಲಾಗಿದೆ. 2020 ಮತ್ತು 2021 ಲಾಕ್ಡೌನ್ ಪರಿಣಾಮವಾಗಿ ಸರಿ ಸುಮಾರು 5,000 ಕೋಟಿ ನಷ್ಟ ಸಂಭವಿಸಿರಬದು ಎಂದಾದರೆ ಆ ನಷ್ಟವನ್ನು ಹೆಚ್ಚು ತೆರಿಗೆ ಸಂಗ್ರಹ ಮಾಡುವ ಮೂಲಕ ನಷ್ಟವನ್ನು ಭತ್ಯೆ ಮಾಡಿದ್ದಾರೆ .
ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಬ್ಯಾರೆಲ್ ಗೆ ಇಷ್ಟು ಅಂತ ನಿಗದಿಪಡಿಸುಲಾಗುತ್ತದೆ. ಇದನ್ನು ಅಮರಿಕಾನ್ ಡಾಲರ್ ಮಾನದಲ್ಲಿ ಅಳೆಯುತ್ತಾರೆ. ಪ್ರತೀ ಬ್ಯಾರೆಲ್ ನ ದರವನ್ನು ಡಾಲರ್ ರೇಟ್ ಗೆ ಗುಣಿಸಿ ರೂಪಾಯಿ ದರವನ್ನಾಗಿ ಪರಿವರ್ತಿಸುತ್ತಾರೆ. ನಂತರ ಇದರ ಮೇಲೆ ಸರಿ ಸುಮಾರು 35% ಪೆಟ್ರೋಲ್ ಮೇಲೆ ಮತ್ತು 24% ಡೀಸೆಲ್ ಮೇಲೆ ರಾಜ್ಯ ಸರ್ಕಾರ ತೆರಿಗೆ ವಿಧಿಸುತ್ತದೆ. ಹೀಗೆ ಒಂದು ಕಡೆ ಆದ ನಷ್ಟವನ್ನು ಇನ್ನೊಂದು ಕಡೆ ಸಂಗ್ರಹಿಸಿ ಸರಿದೂಗಿಸುತ್ತಾರೆ.
ಈ ದಿನ ನಿತ್ಯ ಬೆಲೆ ಏರಿಳಿತದ ಲಾಭ-ನಷ್ಟ ವನ್ನು ಪೆಟ್ರೋಲ್ ಪಂಪ್ ನ ಮಾಲೀಕರು ಹೇಗೆ ನಿಭಾಯಿಸುತ್ತಾರೆ ? ಮುಂದಿನ ಲೇಖನದಲ್ಲಿ ನಿರೀಕ್ಷಿಸಿ.
ಸಚಿನ್ ಕೃಷ್ಣ ಭಟ್