Connect with us

    UDUPI

    ಉಡುಪಿ ಕೊರೊನಾ ಗೆ ಟಾರ್ಗೇಟ್ ಆಗುತ್ತಿವೆ ಹೊಟೇಲ್ ಗಳು….!!

    ಉಡುಪಿ ಜುಲೈ 28:ಉಡುಪಿಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ  ಉಡುಪಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಗೆ ಹೋಟೆಲ್ ಗಳು ಮೊದಲ ಟಾರ್ಗೆಟ್ ಆಗುತ್ತಿವೆ. ಜಿಲ್ಲಾ ಕೇಂದ್ರದಲ್ಲಿರುವ ಜನಪ್ರಿಯ ಹೋಟೆಲುಗಳು ಒಂದೊಂದಾಗಿ ಸೀಲ್ ಡೌನ್ ಆಗುತ್ತಿದೆ.

    ನಗರದ ಓಲ್ಡ್ ತಾಲೂಕು ಆಫೀಸ್ ಕಚೇರಿ ಸಮೀಪದಲ್ಲಿರುವ ಹೋಟೆಲೊಂದರ ಸಿಬ್ಬಂದಿಗೆ ಇತ್ತೀಚೆಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಹೊಟೇಲ್ ನ ಹೆಡ್ ಕುಕ್ ಗೆನೆ ಕೊರೋನಾ ಸೋಂಕು ಕಂಡುಬಂದಿತ್ತು. ಸದ್ಯ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕ್ವಾರಂಟೈನ್ ವಿಧಿಸಲಾಗಿದೆ. ಹೋಟೆಲ್ ನೊಳಗೆ ಕ್ವಾರಂಟೈನ್ ಆಗಿರುವ ಸಿಬ್ಬಂದಿಗಳು ಮತ್ತು ಮಾಲಕರು ಜೊತೆಯಾಗಿ ಕುಳಿತು ಭಜನೆ ಹಾಗೂ ಭಜನಾ ನೃತ್ಯ ಮಾಡುತ್ತಿರುವ ದೃಶ್ಯ ಸದ್ಯ ವೈರಲ್ ಆಗಿದೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಹೋಟೆಲ್ ನ ಸಿಬ್ಬಂದಿಗಳು ಕ್ವಾರಂಟೈನ್ ನಲ್ಲೂ ಜೀವನೋಲ್ಲಾಸ ಕಳೆದುಕೊಂಡಿಲ್ಲ. ಹೋಟೆಲ್ ನ ಮಾಲಕರು ಮತ್ತು ಸಿಬ್ಬಂದಿಗಳು ದೇವರ ಸ್ಮರಣೆ ಮಾಡುವ ಮೂಲಕ ಸಮಯ ಕಳೆಯುತ್ತಿರೋದು ಎಲ್ಲರ ಗಮನ ಸೆಳೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply