FILM
20 ಯೂಟ್ಯೂಬ್ ಚಾನೆಲ್ ಗಳ ವಿರುದ್ದ ನಟಿ ಹನಿರೋಸ್ ದೂರು
ಕೇರಳ ಜನವರಿ 09: ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ದ ಅಶ್ಲೀಲ ಕಮೆಂಟ್ ಮಾಡಿದ್ದಕ್ಕೆ ಖ್ಯಾತ ಉದ್ಯಮಿ ಚೆಮ್ಮನೂರು ಜ್ಯುವೆಲರ್ಸ್ ಮಾಲೀಕನನ್ನ ಅರೆಸ್ಟ್ ಮಾಡಿಸಿದ್ದ ನಟಿ ಹನಿರೋಸ್ ಇದೀಗ ಯೂಟ್ಯೂಬರ್ ಗಳ ವಿರುದ್ದ ತಿರುಗಿ ಬಿದ್ದಿದ್ದಾರೆ.
ತಮ್ಮ ವಿರುದ್ದ ಅಶ್ಲೀಲ ಕಮೆಂಟ್ ಹಾಗೂ ಮಾನಹಾನಿ ರೀತಿಯಲ್ಲಿ ಕಂಟೆಂಟ್ ಮಾಡುವವರ ವಿರುದ್ದ ನಟಿ ಹನಿರೋಸ್ ಇದೀಗ ತಿರುಗಿ ಬಿದ್ದಿದ್ದಾರೆ. ಈಗಾಗಲೇ್ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೆಜ್ ಹಾಕಿರುವವರ ವಿರುದ್ದ ದೂರು ನೀಡಿರುವ ಹನಿರೋಸ್ ಇದೀಗ ಬರೋಬ್ಬರಿ 20 ಕಿಡಿಗೇಡಿ ಯೂಟ್ಯೂಬ್ ಚಾನಲ್‌ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿತ ಯೂಟ್ಯೂಬ್ ಚಾನಲ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹನಿ ರೋಸ್ ಎರ್ನಾಕುಲಂ ಪೊಲೀಸರಿಗೆ ದೂರು ನೀಡಿದ್ದಾರೆ ಈ 20 ಯೂಟ್ಯೂಬ್ ಚಾನಲ್‌ಗಳು ಹನಿ ರೋಸ್ ಬಗ್ಗೆ ಪ್ರಚೋದನಕಾರಿ ಹಾಗೂ ಮಾನಹಾನಿ ಮಾಡುವಂತೆ ಚಿತ್ರ, ವಿಡಿಯೊಗಳನ್ನು ತಿರುಚಿ ಹಾಕಿದ್ದಲ್ಲದೇ ತಪ್ಪು ಮಾಹಿತಿಯನ್ನು ಕೊಟ್ಟು ಜನಸಾಮಾನ್ಯರ ದಾರಿ ತಪ್ಪಿಸಿದ್ದಾರೆ ಎಂದು ರೋಸ್ ಆರೋಪಿಸಿದ್ದಾರೆ.
ಪೊಲೀಸರು ಈ ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಕೆಲ ದಿನಗಳ ಹಿಂದೆ ಫೇಸ್‌ಬುಕ್ ಪುಟದಲ್ಲಿಯೂ ಕೆಲವು ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಹನಿ ರೋಸ್ ಆರೋಪಿಸಿ ದೂರು ದಾಖಲಿಸಿದ್ದರು.