ಕೇರಳದಿಂದ ಬಂದು‌ ದ.ಕ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಯುವಕನನ್ನು ಕ್ವಾರಂಟೈನ್ ಗೆ ಕಳುಹಿಸಿದ ಪೊಲೀಸರು

ಬಂಟ್ವಾಳ ಎಪ್ರಿಲ್ 15: ಕೇರಳದಿಂದ ಬಂದು‌ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಯುವಕನನ್ನು ಪತ್ತೆ ಹಚ್ಚಿ ಹಾಸ್ಪಿಟಲ್ ಕ್ವಾರೈಂಟೈನ್ ಗೆ ಒಳಪಡಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳದ ನಿವಾಸಿಯಾಗಿರುವ ಈತ ಕೇರಳದ ಮಲಪ್ಪುರಂ ನಲ್ಲಿ ಉದ್ಯೋಗಿಯಲ್ಲಿದ್ದ ಕೊರೊನಾ ಹಿನ್ನಲೆ ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾದ ನಂತರ ಲಾರಿ ಮೂಲಕ ಜಿಲ್ಲೆಗೆ ಆಗಮಿಸಿದ್ದು ಸಂಬಂಧಿಕರ ಮನೆಯಲ್ಲಿ ತಂಗಿದ್ದ. ಈ ಕುರಿತಂತೆ ಸ್ಥಳೀಯರ ದೂರಿನ ಮೇರೆಗೆ ಪೋಲೀಸರ ಕಾರ್ಯಾಚರಣೆ ನಡೆಸಿ, ಯುವಕನನ್ನು ಪತ್ತೆಹಚ್ಚಿ ಹಾಸ್ಪಿಟಲ್ ಕ್ವಾರೈಂಟೈನ್ ಗೆ ದಾಖಲಿಸಿದ್ದಾರೆ. ಅಲ್ಲದೆ ಸರಕಾರದ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಯುವಕನ ಮೇಲೆ ಬಂಟ್ವಾಳ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.