LATEST NEWS
ಹೋಂ ಕ್ವಾರಂಟೈನ್ ನಲ್ಲಿರುವ ಕಣ್ಗಾವಲಿಗೆ ತಂತ್ರಜ್ಞಾನದ ಮೊರೆ ಹೋದ ಉಡುಪಿ ಜಿಲ್ಲಾಡಳಿತ

ಹೋಂ ಕ್ವಾರಂಟೈನ್ ನಲ್ಲಿರುವ ಕಣ್ಗಾವಲಿಗೆ ತಂತ್ರಜ್ಞಾನದ ಮೊರೆ ಹೋದ ಉಡುಪಿ ಜಿಲ್ಲಾಡಳಿತ
ಉಡುಪಿ ಮೇ.31: ಉಡುಪಿ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೊಂಕು ಹೆಚ್ಚುತ್ತಿರುವ ಹಿನ್ನಲೆ ಉಡುಪಿ ಜಿಲ್ಲಾಡಳಿತ ಹೊಂ ಕ್ವಾರಂಟೈನ್ ನಲ್ಲಿ ಇರುವವರ ಮೇಲೆ ಆ್ಯಪ್ ಕಣ್ಗಾವಲು ಇಡಲು ನಿರ್ಧರಿಸಿದೆ. ವಿದೇಶ, ಹೋರ ರಾಜ್ಯದಿಂದ ಬಂದು ಸಾಂಸ್ಥಿಕ ಹೊಂ ಕ್ವಾರಂಟೈನ್ ಇರುವವರ ಮೇಲೆ ಕಣ್ಗಾವಲು ಇಡಲು ಜಿಲ್ಲಾಡಳಿತ ತಂತ್ರಜ್ಞಾನ ಮೊರೆ ಹೋಗಿದೆ.
ಉಡುಪಿ ಹೋಂ ಕ್ವಾರಂಟೈನ್ ಇರುವವರಲ್ಲಿ ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಅಲ್ಲದೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಅನಗತ್ಯ ಓಡಾಟ ನಡೆಸುತ್ತಿರುವ ಕಾರಣ ಜಿಲ್ಲಾಡಳಿತ ತಂತ್ರಜ್ಞಾನದ ಮೊರೆ ಹೋಗಿದ್ದು, ಜಿಲ್ಲಾಡಳಿತದಿಂದ ಹೋಂ ಕ್ವಾರಂಟೈನ್ ಮೇಲೆ ಕಣ್ಗಾವಲು ಇಡಲು ಕ್ವಾರಂಟೈನ್ ಆ್ಯಫ್ ಜಿಯೋ ಫೆನ್ಸಿಂಗ್ ವ್ಯವಸ್ಥೆ ಜಾರಿ ಮಾಡಿದ್ದಾರೆ. ದುಬೈ, ಮಹಾರಾಷ್ಟ್ರ, ತೆಲಂಗಾಣ, ಕೇರಳದಿಂದ ಜಿಲ್ಲೆಗೆ ಬಂದಿರುವ 8168 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ.

ಕ್ವಾರಂಟೈನ್ ನಲ್ಲಿರುವ ಮನೆಯಿಂದ ಹೊರಗಡೆ ಬಂದ್ರೆ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗಲಿದ್ದು, ಕ್ವಾರಂಟೈನ್ ವ್ಯಕ್ತಿಗೆ ಒಂದು ಬಾರಿ ವಾರ್ನ್ ಮಾಡ್ತಾರೆ. ಎರಡನೇ ಬಾರಿ ಉಲ್ಲಂಘನೆ ನಡೆಸಿದ್ರೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಅಲ್ಲದೆ ಹೋಮ್ ಕ್ವಾರಟೈನ್ ವ್ಯಕ್ತಿ ವಿಎ , ಪಿಡಿಓ ಜೊತೆಗೆ ನಿಂತು ಸೆಲ್ಪಿ ರವಾನೆಗೆ ಸೂಚನೆ ನೀಡಲಾಗಿದ್ದು, ಸ್ಮಾರ್ಟ್ ಪೋನ್ ಇರೊ ಮನೆಗಳಿಗೆ ಆ್ಯಫ್ ಮೂಲಕ ಕಾವಲು ಇಡಲಾಗಿದ್ದು, ಅಅ್ಲದೆ ಆ್ಯಪ್ ಇಲ್ಲದ ಮನೆಗಳ ಪಟ್ಟಿಯನ್ನು ಗ್ರಾಮ ಪಂಚಾಯ್ ಮೂಲಕ ನಿಗಾ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಮಾಹಿತಿ ನೀಡಿದ್ದಾರೆ.