Connect with us

LATEST NEWS

ಉಡುಪಿಯ 14 ಕೊರೊನಾ ಸೋಂಕಿತರು ಗುಣಮುಖ

ಉಡುಪಿಯ 14 ಕೊರೊನಾ ಸೋಂಕಿತರು ಗುಣಮುಖ

ಉಡುಪಿ ಮೇ.31: ಉಡುಪಿಯಲ್ಲಿ ಒಂದೆಡೆ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ ಇನ್ನೊಂದೆಡೆ ಅಷ್ಟೇ ಪ್ರಮಾಣದಲ್ಲಿ ಕೊರೊನಾ ಗೆದ್ದು ಮನೆಗೆ ತೆರಳುತ್ತಿದ್ದಾರೆ. ಇಂದು ಕೂಡ ಉಡುಪಿಯ 14 ಕೊರೊನಾ ಸೋಂಕಿತರು ಗುಣಮುಖರಾಗಿ ಮನೆ ತೆರಳಿದ್ದಾರೆ. ಕುಂದಾಪುರ ಸರಕಾರಿ ಆಸ್ಪತ್ರೆಯಿಂದ 14 ಜನ ಬಿಡುಗಡೆಗೊಂಡಿದ್ದು ಅವರಿಗೆ ಡಿಎಚ್ ಓ ಹೂವಿನ ಗಿಡಗಳನ್ನು ಕೊಟ್ಟು ಬಿಳ್ಕೊಟ್ಟಿದ್ದು, ಮಕ್ಕಳಿಗೆ ಚಾಕ್ಲೇಟ್ ನೀಡಿ ಬಿಳ್ಕೊಡಲಾಯಿತು.

ಈ ಸಂದರ್ಭ ಎಸಿ, ಪೊಲೀಸರು, ವೈದ್ಯಾಧಿಕಾರಿಗಳು ಭಾಗಿಯಾಗಿದ್ದರು. ಈ ವರೆಗೆ ಉಡುಪಿ ಜಿಲ್ಲೆಯಿಂದ ಈವರೆಗೆ ಒಟ್ಟು 64 ಜನ ಕೊರೊನಾ ರೋಗದಿಂದ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ ಸಕ್ರೀಯ ಕೊರೋನಾ ಕೇಸುಗಳ ಸಂಖ್ಯೆ 112 ಕ್ಕೆ ಇಳಿಕೆಯಾಗಿದೆ.
ಈ ಹಿಂದೆ ಕೊರೊನಾ ಮುಕ್ತ ಜಿಲ್ಲೆಯಾಗಿದ್ದ ಉಡುಪಿ ಈಗ ಕೊರೊನಾ ಸೊಂಕಿತರ ಗುಣಮುಖ ಸಂಖ್ಯೆಯಲ್ಲೂ ದಾಖಲೆ ಬರೆಯುತ್ತಿದೆ.

Facebook Comments

comments