Connect with us

LATEST NEWS

ಸಂಸದರ ನಿಯೋಗದಿಂದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ :ರಕ್ಷಣೆಗೆ ಮನವಿ

ನವದೆಹಲಿ,ಆಗಸ್ಟ್ 01: ಬಿಜೆಪಿ ಸಂಸದರ ನಿಯೋಗ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯ ಗೃಹ ಸಚಿವಾಲಯದ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌ ಇವರ ನೇತೃತ್ವದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಕು.ಶೋಭಾ ಕರಂದ್ಲಾಜೆ,ಪ್ರತಾಪ್ ಸಿಂಹ, ಸುರೇಶ್ ಗೋಪಿ ಹಾಗೂ ರಿಚ್ಚರ್ಡ್ ಹೇ ಇವರನ್ನೊಳಗೊಂಡ ನಿಯೋಗವು ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇವರನ್ನು ಭೇಟಿಯಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ನಡೆದಿರುವ ಬಿ.ಜೆ.ಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಎಲ್ಲಾ ಕೊಲೆಗಳ ಬಗ್ಗೆ ರಾಜ್ಯ ಸರಕಾರಗಳಿಂದ ವರದಿ ತರಿಸುವಂತೆ ಮತ್ತು ಅಪರಾಧಿಗಳನ್ನು ಶೀಘ್ರ ಬಂಧಿಸುವಂತೆ ಹಾಗೂ ರಾಜ್ಯದಲ್ಲಿನ ಅಶಾಂತಿ ವಾತಾವರಣವನ್ನು ಶಾಂತಗೊಳಿಸಲು ರಾಜ್ಯ ಸರಕಾರಗಳ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ್ದಾರೆ.
ಅಲ್ಲದೇ ಸಂಸದರು ಆರ್.ಎಸ್.ಎಸ್  ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿನ್ನಲೆಯಲ್ಲಿ ಪಿಎಫ್ಐ, ಕೆಎಫ್‍ಡಿ ಹಾಗೂ ಎನ್‍ಡಿಎಫ್ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಹಿಂದುಪರ ಸಂಘಟನೆ ಕಾರ್ಯಕರ್ತರ ಹತ್ಯೆ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆಯೂ ಗೃಹ ಸಚಿವರನ್ನು ಆಗ್ರಹಿಸಿದ್ದಾರೆ. ಕೇರಳದಲ್ಲಿ ಕಮ್ಯೂನಿಷ್ಟ್ ಪಕ್ಷವು ಹಿಂದೂ ಸಂಘಟನೆಗಳ ಹಾಗೂ ಭಾ.ಜ.ಪಾ ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದು ರಾಜಕೀಯ ಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಮನವಿಯಲ್ಲಿ ಕೋರಿದ್ದಾರೆ.

Facebook Comments

comments