LATEST NEWS
ಒಂದು ವರ್ಗದ ವೋಟ್ ಗಾಗಿ ಜೊಲ್ಲು ಸುರಿಸುತ್ತಿದ್ದಾರೆ – ಗೃಹ ಸಚಿವ ಅರಗ ಜ್ಞಾನೇಂದ್ರ

ಉಡುಪಿ ಅಕ್ಟೋಬರ್ 09: ಆರ್ ಎಸ್ ಎಸ್ ಬಗ್ಗೆ ಕುಮಾರಸ್ವಾಮಿ ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತಿದೆ, ಆದರೂ ಒಂದು ವರ್ಗದ ಓಟ್ ಬ್ಯಾಂಕಿಗೆ ಅವರು ಜೊಲ್ಲು ಸುರಿಸುತ್ತಿದ್ದಾರೆ ಎಂದು ಗೃಹಸಚಿವ ಅರಗ ಜ್ಞಾನೆಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಸಿದ್ದರಾಮಯ್ಯಗೆ ಆರೆಸ್ಸೆಸ್ ಏನು ಮಾಡಿದೆ ಹೇಳಿ? ನಾನು ಆರೆಸ್ಸೆಸ್ ರಾಷ್ಟ್ರಪತಿ ಉಪರಾಷ್ಟ್ರಪತಿ ಆರ್ ಎಸ್ ಎಸ್, ಪ್ರಧಾನಿ ಮೋದಿ ಆರೆಸ್ಸೆಸ್ ನಿಂದ ಬಂದವರು ನಾವು ನಿಮಗೆ ಏನು ತೊಂದರೆ ಮಾಡಿದ್ದೇವೆ ಹೇಳಿ ಎಂದರು, ಆರೆಸ್ಸೆಸ್ ದೇಶಭಕ್ತಿ ಹೇಳಿಕೊಡುವ ದೊಡ್ಡ ಸಂಘಟನೆ, ನಮ್ಮನ್ನು ಜನ ಆಯ್ಕೆ ಮಾಡಿದ್ದಾರೆ. ವೋಟ್ ಕಿತ್ತುಕೊಳ್ಳಲು ಕುಮಾರಸ್ವಾಮಿ ಸಿದ್ದರಾಮಯ್ಯ ಕಾಂಪಿಟೇಷನ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಬೆಂಗಳೂರಿನಲ್ಲಿ rss ಬಗ್ಗೆ ಪ್ರಸ್ಮೆಟ್ ಮಾಡಲಿ, ಎಲ್ಲವೂ ಚರ್ಚೆಯಾಗಲಿ ನೋಡೋಣ ಎಂದು ಗೃಹಸಚಿವ ಅರಗ ಜ್ಞಾನೆಂದ್ರ ಹೇಳಿದ್ದಾರೆ.
