Connect with us

    BANTWAL

    ಬಂಟ್ವಾಳ ಗ್ಯಾಂಗ್ ರೇಪ್ – ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

    ಉಡುಪಿ ಅಕ್ಟೋಬರ್ 09: ಬಂಟ್ವಾಳದಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


    ಅಕ್ಟೋಬರ್ 8 ರಂದುಈ ಘಟನೆ ನಡೆದಿದ್ದು, ಬಂಟ್ವಾಳ ನಿವಾಸಿಯಾಗಿರುವ ಬಾಲಕಿ ಬಂಟ್ವಾಳದ ಎಸ್.ವಿ.ಎಸ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದು, ಎಂದಿನಂತೆ ಶಾಲೆ ಮುಗಿಸಿ ಶಾಲೆ ಮುಂಭಾಗದ ಅಟೋ ಸ್ಟಾಂಡ್ ಬಳಿ ನಿಂತಿದ್ದ ಸಂದರ್ಭದಲ್ಲಿ ಆರೋಪಿಗಳ ಕಾರು ಬಾಲಕಿ ನಿಂತಿದ್ದ ಬಳಿ ನಿಂತಿದೆ. ಕಾರಿನಲ್ಲಿದ್ದ ಮಂದಿ ಆಕೆಗೆ ಮತ್ತು ಬರಿಸುವ ಚಾಕಲೇಟನ್ನು ನೀಡಿ ಆಕೆಯನ್ನು ಅಮ್ಟಾಡಿ ಎನ್ನುವ ಪ್ರದೇಶದಲ್ಲಿರುವ ರೂಂ ಒಂದಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾರೆ.

    ಈ ಘಟನೆ ಕುರಿತಂತೆ ಪೊಲೀಸರು ಐಪಿಸಿ ಸೆಕ್ಷನ್ 366(A), 376(D), 506 ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply