Connect with us

    DAKSHINA KANNADA

    ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸ ದೌರ್ಜನ್ಯ,ಸತ್ಯ ಪ್ರಮಾಣಕ್ಕೆ ಹಿಂಜಾವೇ ಆಹ್ವಾನ

    ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸ ದೌರ್ಜನ್ಯ,ಸತ್ಯ ಪ್ರಮಾಣಕ್ಕೆ ಹಿಂಜಾವೇ ಆಹ್ವಾನ

    ಪುತ್ತೂರು, ಡಿಸೆಂಬರ್ 20: ಹಿಂದೂ ಮುಖಂಡನ ಮೇಲೆ ದುರುದ್ಧೇಶಪೂರ್ವಕ ದೌರ್ಜನ್ಯ ಎಸಗಿಲ್ಲವೆಂದು ಸತ್ಯ ಪ್ರಮಾಣಕ್ಕೆ ಪುತ್ತೂರು ಸಂಪ್ಯ ಎಸ್.ಐ ಸೇರಿದಂತೆ ಉಳಿದ ಸಿಬ್ಬಂದಿಗಳು ಬರಲಿ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಘಟಕ ಸವಾಲೊಡ್ಡಿದೆ.

    ಡಿಸೆಂಬರ್ 18 ರಂದು ಬಡಗನ್ನೂರು ಗ್ರಾಮದ ಮೈಂದನಡ್ಕ ಎಂಬಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಯೂಸುಫ್ (48) ಎನ್ನುವ ವ್ಯಕ್ತಿಯನ್ನು ಹಿಂದೂ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು ಪೋಲೀಸ್ ವಶಕ್ಕೆ ಒಪ್ಪಿಸಿದ್ದರು.

    ಆ ಬಳಿಕ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು.

    ಈ ಸಂದರ್ಭದಲ್ಲಿ ಎರಡೂ ಗುಂಪುಗಳನ್ನು ಚದುರಿಸಲು ಪೋಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಿದ್ದರು.

    ಬಳಿಕ ಸ್ಥಳಕ್ಕೆ ಆಗಮಿಸಿದ್ದ ಭಜರಂಗದಳ ಮುಖಂಡ ಮುರಳೀಕೃಷ್ಣ ಹಸಂತಡ್ಕ ಹಾಗೂ ಹಿಂದೂ ಜಾಗರಣ ವೇದಿಕೆಯ ಅಜಿತ್ ರೈ ಹೊಸಮನೆ ಸೇರಿದಂತೆ ಹಲವರ ಮೇಲೆ ಕೇಸನ್ನೂ ದಾಖಲಿಸಿದ್ದರು.

    ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಅಜಿತ್ ರೈ ಹೊಸಮನೆ ಅವರನ್ನು ಸಂಪ್ಯ ಪೋಲೀಸರು ಪೋಲೀಸ್ ಠಾಣೆಯ ಒಳಗೆ ಕರೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಪೋಲೀಸರ ಹಲ್ಲೆಯಿಂದಾಗಿ ಅಜಿತ್ ರೈ ಮೊಣಕಾಲಿನ ಮೂಳೆ ಮುರಿತಕ್ಕೊಳಗಾಗಿದೆ.

    ಈ ನಡುವೆ ಸಂಪ್ಯ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್ ಪತ್ರಿಕಾ ಹೇಳಿಕೆ ನೀಡಿ ಅಜಿತ್ ರೈ ಅವರಿಗೆ ಲಾಠಿಚಾರ್ಚ್ ನಡೆಸುವಾಗ ಗಾಯಗಳಾಗಿದ್ದು, ಆತನಿಗೆ ಪೋಲೀಸ್ ಠಾಣೆಯ ಒಳಗೆ ಥಳಿಸಿಲ್ಲ ಎಂದು ಸಮಜಾಯಷಿ ನೀಡಿದ್ದರು.

    ಈ ಹಿನ್ನಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪುತ್ತೂರು ಹಿಂದೂ ಜಾಗರಣ ವೇದಿಕೆ ತಮ್ಮ ಮುಖಂಡನ ಮೇಲೆ ಪೋಲೀಸ್ ಠಾಣೆಯ ಒಳಗೆ ಹಲ್ಲೆ ನಡೆಸಿಲ್ಲ ಎನ್ನುವ ವಿಚಾರದಲ್ಲಿ ಸತ್ಯ ಪ್ರಮಾಣಕ್ಕೆ ಬರಬೇಕೆಂದು ಆಹ್ವಾನ ನೀಡಿದೆ.

    ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಅಥವಾ ಕಾನತ್ತೂರು ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಬೇಕೆಂದು ಆಗ್ರಹಿಸಿದೆ.

    ಅಲ್ಲದೆ ಈ ಕ್ರೌರ್ಯದಲ್ಲಿ ಭಾಗಿಯಾದ ಸಿಬ್ಬಂದಿಗಳಾದ ಚಂದ್ರ, ಕರುಣಾಕರ ಹಾಗೂ ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿದ ಸುರೇಶ್ ಗೌಡರೂ ತಮ್ಮ ಆಹ್ವಾನವನ್ನು ಸ್ವೀಕರಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದೆ

    . ಇಲ್ಲದೇ ಹೋದಲ್ಲಿ ಮುಂದಿನ ಪುತ್ತೂರು ಜಾತ್ರೆಯ ಸಂದರ್ಭದಲ್ಲಿ ಈ ಎಲ್ಲರಿಗೂ ಮಹಾಲಿಂಗೇಶ್ವರ ಸತ್ಯದ ಅರಿವನ್ನು ತೋರಿಸಿಕೊಡುತ್ತಾನೆ ಎನ್ನುವ ಎಚ್ಚರಿಕೆಯನ್ನೂ ನೀಡಿದೆ

    . ಪೋಲೀಸರನ್ನು ದೇಶಭಕ್ತರೆಂದು ತಿಳಿದಿರುವ ಹಿಂದೂ ಸಂಘಟನೆಗಳಿಗೆ ಇದೀಗ ಪೋಲೀಸರು ಸರಕಾರದ ಹಿಂಬಾಲಕರಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಹಿಸಲಾಗುತ್ತಿಲ್ಲ ಎಂದು ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply