LATEST NEWS
ಕನ್ನಡ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಕೆನ್ನೆಗೆ ಬಾರಿಸಿದ ಸಂಯುಕ್ತ ಹೆಗಡೆ
ಕನ್ನಡ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಕೆನ್ನೆಗೆ ಬಾರಿಸಿದ ಸಂಯುಕ್ತ ಹೆಗಡೆ
ಬೆಂಗಳೂರು ಡಿಸೆಂಬರ್ 20: ಕನ್ನಡ ಕಿರುತೆರೆಯಲ್ಲಿ ನಡೆಯತ್ತಿರುವ ಕನ್ನಡ ಬಿಗ್ ಬಾಸ್ ನಿಂದ ಕಿರಿಕ್ ಪಾರ್ಟಿಯ ನಟಿ ಸಂಯುಕ್ತ ಹೆಗಡೆ ಹೊರಬಂದಿದ್ಗಾರೆ.
ಬಿಗ್ ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ನಡೆದ ಗಲಾಟೆಯಲ್ಲಿ ಸಂಯುಕ್ತ ಹೆಗಡೆ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿದ್ದಾರೆ. ಸಂಯುಕ್ತ ಹೆಗಡೆ ಪ್ರಕಾರ ಸಮೀರ್ ಆಚಾರ್ಯ ಅವರು ಟಾಸ್ಕ್ ನ ಸಂದರ್ಭದಲ್ಲಿ ಸಂಯುಕ್ತ ಹೆಗಡೆ ಅವರ ಮೈಯನ್ನು ಮುಟ್ಟಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸಿಟ್ಟಿಗೆದ್ದ ಸಂಯುಕ್ತ ಹೆಗಡೆ ಸಮೀರ್ ಆಚಾರ್ಯ ಅವರಿಗೆ ಹೊಡೆದಿದ್ದಾರೆ.
ಬಿಗ್ ಬಾಸ್ ನ ರೂಲ್ಸ್ ಪ್ರಕಾರ ಮನೆಯ ಸ್ಪರ್ಧಿಗಳು ಯಾರಿಗೂ ಹೊಡೆಯುವಂತಿಲ್ಲ. ಈ ಹಿನ್ನಲೆಯಲ್ಲಿ ಬಿಗ್ ಬಾಸ್ ಸಂಯುಕ್ತ ಹೆಗಡೆ ಅವರನ್ನು ಮನೆಯಿಂದ ಹೊರ ಹಾಕಿದೆ.
ಕಿರಿಕ್ ಪಾರ್ಟಿ ನಟಿ ಸಂಯುಕ್ತ ಹೆಗಡೆ ಬಿಗ್ ಬಾಸ್ ಮೆನೆಗೆ ಅತಿಥಿಯಾಗಿ ಬಂದಿದ್ದರು. ಟಾಸ್ಕ್ ಒಂದರಲ್ಲಿ ನಡೆದ ಅನಾಹುತ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಿದೆ.
You must be logged in to post a comment Login