FILM
ರುಕೊ ಜರಾ ಸಬರ್ ಕರೊ ಖ್ಯಾತಿಯ ವಿಕಾಸ್ ಪಾಠಕ್ ಆರೆಸ್ಟ್
ಮುಂಬೈ : ತಮ್ಮ ಡೈಲಾಗ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರುಕೊ ಜರಾ ಸಬರ್ ಕರೊ, ಹಿಂದೂಸ್ತಾನಿ ಭಾವು ಖ್ಯಾತಿಯ ವಿಕಾಸ್ ಪಾಠಕ್ರನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿಸಿದ್ದಾರೆ.
ವಿಕಾಸ್ ಪಾಠಕ್ ಮಹಾರಾಷ್ಟ್ರ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಅವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಹೊರಿಸಿ ಬಂಧಿಸಲಾಗಿದೆ.
10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಆಪ್ ಲೈನ್ ಪರೀಕ್ಷೆಗಳನ್ನು ವಿರೋಧಿಸಿ ವರ್ಷಾ ಗಾಯಕ್ವಾಡ್ ವಿರುದ್ದ ಪ್ರತಿಭಟನೆ ನಡೆಸಿದ್ದರು. ವಿಧ್ಯಾರ್ಥಿಗಳಿಗೆ ವಿಕಾಸ್ ಪಾಠಕ್ ಅವರು ವರ್ಷಾ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿ ಎಂದು ಕರೆ ಕೊಟ್ಟಿದ್ದರು ಎಂದು ಆರೋಪಿಸಲಾಗಿದ್ದು, ಈ ಹಿನ್ನಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
You must be logged in to post a comment Login