DAKSHINA KANNADA
ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್‌ಡಿಪಿಐ ಪಕ್ಷದ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಪುತ್ತೂರು, ಅಗಸ್ಟ್ 16: ಕಬಕ ಗ್ರಾಮಪಂಚಾಯತ್ ಗೆ ಸೇರಿದ ಸ್ವಾತಂತ್ರ್ಯ ರಥದಲ್ಲಿದ್ದ ವೀರ ಸಾವರ್ಕರ್ ಚಿತ್ರಕ್ಕೆ ಆಕ್ಷೇಪ ಸಲ್ಲಿಸಿ ರಥಕ್ಕೆ ಎಸ್.ಡಿ.ಪಿ.ಐ ಕಾರ್ಯಕರ್ತರು ಹಾಗೂ ಇತರೆ ವ್ಯಕ್ತಿಗಳಿಂದ ಅಡ್ಡಿ ಪಡಿಸಲಾಗಿತ್ತು. ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳಿಂದ ಇಂದು ಪ್ರತಿಭಟನೆ ನಡೆದಿದೆ.
ಕಬಕ ಜಂಕ್ಷನ್ ನಲ್ಲಿ ಸೇರಿದ ನೂರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಹಾಗು ಹಿಂದು ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಹಿಸಿದ್ದಾರೆ. ಪ್ರತಿಭಟನೆಯಲ್ಲಿ ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗಿದೆ.

ಎಸ್.ಡಿಪಿಐ ಪಕ್ಷದ ವಿರುದ್ಧ ಚುನಾವಣಾ ಆಯೋಗಕ್ಕೆ ಪಕ್ಷ ನಿಶೇಧಿಸುವಂತೆ ದೂರು ನೀಡಲು ತೀರ್ಮಾನಿಸಲಾಗಿದೆ. ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸುವ ಮೂಲಕ ದೇಶ ವಿರೋಧಿ ಕೃತ್ಯ. ಗ್ರಾಮ ಗ್ರಾಮಗಳಲ್ಲಿ ವೀರ ಸಾವರ್ಕರ್ ರಥಯಾತ್ರೆ ನಡೆಸಲು ಹಿಂದೂ ಸಂಘಟನೆಗಳ ನಿರ್ಧಾರ ಮಾಡಲಾಗಿದೆ ಎಂದು ಹಿಂದೂ ಮುಖಂಡ ಶರಣ್ ಪಂಪುವೆಲ್ ಹೇಳಿಕೆ ನೀಡಿದ್ದಾರೆ.
VIDEO: