Connect with us

    LATEST NEWS

    ಲೈನ್ ಮ್ಯಾನ್‌ಗಳ ಮಧ್ಯೆ ಕುಳಿತು ಊಟ ಸವಿದು ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿದ ಇಂಧನ ಸಚಿವ ಸುನೀಲ್ ಕುಮಾರ್‌

    ಉಡುಪಿ, ಅಗಸ್ಟ್ 16: ಇಂಧನ ಸಚಿವ ಸುನೀಲ್ ಕುಮಾರ್‌ ಅವರಿಗೆ ಇಂದು ಸ್ವಾತಂತ್ರ್ಯ ದಿನಾಚರಣೆ ಜೊತೆಗೆ, ಹುಟ್ಟು ಹಬ್ಬದ ಸಂಭ್ರಮ. ಸಚಿವರಾದ ಬಳಿಕ ಮೊದಲ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸದೇ ವಿಶೇಷವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.

    ತಮ್ಮ ಹುಟ್ಟೂರು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ , ಎಲ್ಲ ಲೈನ್ ಮ್ಯಾನ್‌ಗಳನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಊಟ ಮಾಡಿದ್ದಾರೆ.

    ತಮ್ಮ ಹುಟ್ಟು ಹಬ್ಬದ ನಿಮಿತ್ತ ಲೈನ್ ಮ್ಯಾನ್‌ಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಲೈನ್ ಮ್ಯಾನ್‌ಗಳ ಮಧ್ಯೆ ಕುಳಿತು ಊಟ ಮಾಡಿದ್ದು, ಮಾತ್ರವಲ್ಲದೇ ಊಟ ಮಾಡುತ್ತಾ ಅವರ ಸಮಸ್ಯೆಯನ್ನು ಆಲಿಸಿದ್ದರು. ಸಚಿವರ ವಿಭಿನ್ನ ಹುಟ್ಟು ಹಬ್ಬ ಆಚರಣೆ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

    VIDEO:

    Share Information
    Advertisement
    Click to comment

    You must be logged in to post a comment Login

    Leave a Reply