LATEST NEWS
ದೀಪಕ್ ರಾವ್ ಹತ್ಯೆ ಖಂಡಿಸಿ – ಹಿಂದೂ ಸಂಘಟನೆಗಳಿಂದ ಹರತಾಳಕ್ಕೆ ಕರೆ

ದೀಪಕ್ ರಾವ್ ಹತ್ಯೆ ಖಂಡಿಸಿ – ಹಿಂದೂ ಸಂಘಟನೆಗಳಿಂದ ಹರತಾಳಕ್ಕೆ ಕರೆ
ಮಂಗಳೂರು ಜನವರಿ 3: ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಹಿನ್ನೆಲೆಯಲ್ಲಿ ಸುರತ್ಕಲ್, ಕೃಷ್ಣಾಪುರ, ಕುಳಾಯಿ ವ್ಯಾಪ್ತಿಯಲ್ಲಿ ಹರತಾಳಕ್ಕೆ ಕರೆ ನೀಡಲಾಗಿದ್ದು, ಸ್ವಯಂ ಪ್ರೇರಿತ ಬಂದ್ ನಡೆಸಲು ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.
ದೀಪಕ್ ರಾವ್ ಅವರ ಶವವನ್ನು ನಗರದ ಎ.ಜೆ ಆಸ್ಪತ್ರೆಯಲ್ಲಿಡಲಾಗಿದ್ದು ನಾಳೆ ಎ.ಜೆ. ಆಸ್ಪತ್ರೆಯಿಂದ ದೀಪಕ್ ರಾವ್ ಶವಯಾತ್ರೆ ನಡೆಯಲಿದೆ. ಆದರೆ, ಶವಯಾತ್ರೆಯನ್ನು ಯಾವರೀತಿಯಲ್ಲಿ ನಡೆಸಬೇಕೆಂದು ನಾಳೆ ನಿರ್ಧರಿಸಲಾಗುವುದು ಎಂದು ಹಿಂದೂ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
