LATEST NEWS
ಸುರತ್ಕಲ್ ನಲ್ಲಿ ಮತ್ತೆ ಯುವಕನ ಮೇಲೆ ತಲವಾರ್ ದಾಳಿ

ಸುರತ್ಕಲ್ ನಲ್ಲಿ ಮತ್ತೆ ಯುವಕನ ಮೇಲೆ ತಲವಾರ್ ದಾಳಿ
ಮಂಗಳೂರು ಜನವರಿ 3: ಸುರತ್ಕಲ್ ನಲ್ಲಿ ಯುವಕನೋರ್ವನ ಮೇಲೆ ತಲವಾರ್ ನಿಂದ ದಾಳಿ ನಡೆಸಿದ ಘಟನೆ ನಡೆದಿದೆ, ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಾಟಿಪಳ್ಳದಿಂದ ಮಂಗಳೂರಿಗೆ ಬರುತ್ತಿದ್ದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡ ತಲವಾರ್ ನಿಂದ ದಾಳಿ ನಡೆಸಿದೆ.
ತಲವಾರ್ ದಾಳಿಯಿಂದ ಗಾಯಗೊಂಡ ಯುವಕನನ್ನು ಬಂದರ್ ನ ಮಹಮ್ಮದ್ ಮುಬಶ್ಶಿರ್ ಎಂದು ಗುರುತಿಸಲಾಗಿದೆ
ಮಹಮ್ಮದ್ ಮುಬಶ್ಶಿರ್ ಸುರತ್ಕಲ್ ನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮುಬಶ್ಶಿರ್ ಅವರ ತಲೆ ಪೆಟ್ಟಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
