LATEST NEWS
ಭಗವಾಧ್ವಜಕ್ಕೆ ಬೆಂಕಿ ಪ್ರಕರಣ – ಹಿಂದೂ ಸಂಘಟನೆಗಳಿಂದ ಪ್ರಕರಣ ದಾಖಲು

ಭಗವಾಧ್ವಜಕ್ಕೆ ಬೆಂಕಿ ಪ್ರಕರಣ – ಹಿಂದೂ ಸಂಘಟನೆಗಳಿಂದ ಪ್ರಕರಣ ದಾಖಲು
ಮಂಗಳೂರು ಅಗಸ್ಟ್ 29: ಭಗವಾಧ್ವಜವನ್ನು ಸುಟ್ಟ ದಲಿತ ಸಂಘಟನೆಗಳ ವಿರುದ್ದ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬೆಳ್ತಂಗಡಿ ಮತ್ತು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಿನಿ ವಿಧಾನಸೌಧ ಮುಂಭಾಗ ಅಗಸ್ಟ್ 28ನೇ ತಾರೀಖು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆದಿತ್ತು. ಈ ವೇಳೆ ಮನುಸ್ಮೃತಿ ಯ ಜೊತೆಗೆ ಭಗಾವಧ್ವಜ ವನ್ನು ಪ್ರತಿಭಟನಾಕಾರರು ಸುಟ್ಟಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದಲಿತ ಮುಖಂಡರ ವರ್ತನೆ ಬಗ್ಗೆ ಹಿಂದೂ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ.

ಅಲ್ಲದೆ ಬೆಳ್ತಂಗಡಿ ಮತ್ತು ಬಂಟ್ವಾಳ ಠಾಣೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಪ್ರತಿಭಟಕಾರಾರ ವಿರುದ್ದ ಪ್ರಕರಣ ದಾಖಲಿಸಿದ್ದು, ಪ್ರತಿಭಟನಾಕಾರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.