Connect with us

LATEST NEWS

ಉಡುಪಿ – ಹಿಜಬ್ ಇಲ್ಲದೆ ತರಗತಿ ಪ್ರವೇಶಕ್ಕೆ ನಿರಾಕರಿಸಿದ ವಿಧ್ಯಾರ್ಥಿನಿಯರು…!!

ಉಡುಪಿ : ಉಡುಪಿಯಲ್ಲಿ ಹಿಜಬ್ ವಿವಾದ ಮುಂದುವರೆದಿದ್ದು, ಹಿಜಬ್ ಧರಿಸದೇ ಪಾಠ ಕೇಳಲು ಕೆಲವು ವಿಧ್ಯಾರ್ಥಿನಿಯರು ನಿರಾಕರಿಸಿರುವ ಘಟನೆ ನಡೆದಿದೆ. ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಿದ ಕುಂದಾಪುರದ ಸರಕಾರಿ ಪಿಯು ಕಾಲೇಜಿನ 23 ವಿದ್ಯಾರ್ಥಿಗಳು ಹಾಗೂ ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ 6 ಜನ ವಿದ್ಯಾರ್ಥಿನಿಯರು ಇಂದು ತರಗತಿಗೆ ಗೈರು ಹಾಜರಾಗಿದ್ದಾರೆ. ಇದೇ ವೇಳೆ ಇಲ್ಲಿನ ಎಂಜಿಎಂ ಕಾಲೇಜಿನ ಪಿಯು ತರಗತಿಗೆ ಇಂದು ರಜೆ ಘೋಷಿಸಲಾಗಿದೆ.

ಕೋರ್ಟ್ ಆದೇಶದ ಪ್ರಕಾರ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ಇರಲಿಲ್ಲ. ಇದನ್ನು ವಿದ್ಯಾರ್ಥಿನಿಗಳಿಗೆ ಮನವರಿಕೆ ಮಾಡಿದ್ದೇವೆ. ಕೋರ್ಟ್ ತೀರ್ಪು ಬರುವವರೆಗೆ ಕಾಯುತ್ತೇವೆಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಒಟ್ಟು 2326 ವಿದ್ಯಾರ್ಥಿನಿಯರಿದ್ದು 196 ಮಂದಿ ಮುಸ್ಲಿಂರಿದ್ದಾರೆ. ಸದ್ಯ 40 ಮಂದಿ ಮಾತ್ರ ಹಿಜಾಬ್ ತೆಗೆಯಲು ಒಪ್ಪಿಲ್ಲ’ ಎಂದು ಪ್ರಾಂಶುಪಾಲರ ಭಾಸ್ಕರ ಶೆಟ್ಟಿ ಹೇಳಿದರು. ಹಿಜಾಬ್ ನಮ್ಮ ಹೆಮ್ಮೆ. ನಾವು ಮೊದಲಿನಿಂದಲೂ ಹಿಜಾಬ್ ಹಾಕುತ್ತಿದ್ದೇವೆ. ಕೋರ್ಟ್ ಆದೇಶ ಬರುವವರೆಗೂ ಕಾಯುತ್ತೇವೆ’ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದರು

Advertisement
Click to comment

You must be logged in to post a comment Login

Leave a Reply