LATEST NEWS
ಪಾವಂಜೆ ಸೇತುವೆಯಿಂದ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಮಂಗಳೂರು ಫೆಬ್ರವರಿ 16: ಪಾವಂಜೆ ಸೇತುವೆಯಿಂದ ನದಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಸುಚೇಂದ್ರ ಕುಮಾರ್(39) ಎಂದು ಗುರುತಿಸಲಾಗಿದೆ. ಸುಚೇಂದ್ರ ಕುಮಾರ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ಶಿವಮೊಗ್ಗದಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರ ಪತ್ನಿಯ ಮನೆ ಚೇಳಾಯರುನಲ್ಲಿದೆ.
ಬುಧವಾರ ಬೆಳಗ್ಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ಸುಮಾರು 11 ಗಂಟೆಯ ಸುಮಾರಿಗೆ ಸೇತುವೆಯಿಂದ ಹಾರಿದ ಮಾಹಿತಿ ದೊರಕಿ , ಸ್ಥಳಕ್ಕೆ ಧಾವಿಸಿದ ಮೂಲ್ಕಿ ಪೊಲೀಸರು ಸ್ಥಳೀಯರ ಸಹಕಾರದಿಂದ ಮೃತದೇಹ ಮೇಲಕ್ಕೆತ್ತಿದ್ದಾರೆ.
You must be logged in to post a comment Login